ಮಗಳ ಮದುವೆ ಆಮಂತ್ರಣ ನೀಡಲು ಸಿ ಎಮ್ ಇಬ್ರಾಹಿಂ ಹಳೆ ದೋಸ್ತಿ ಸಿದ್ದರಾಮಯ್ಯನವರ ನಿವಾಸಕ್ಕೆ ಆಗಮಿಸಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 04, 2022 | 5:13 PM

ಸೋಮವಾರ ಇಬ್ರಾಹಿಂ ಅವರು ತಮ್ಮ ಮಗಳ ಮದುವೆ ಆಮಂತ್ರಣ ಪತ್ರಿಕೆ ನೀಡಲು ಸಿದ್ದರಾಮಯ್ಯನವರ ಅಧಿಕೃತ ನಿವಾಸಕ್ಕೆ ಆಗಮಿಸಿದ್ದರು. ಹಳೇ ದೋಸ್ತಿಗಳು ಸ್ವಲ್ಪ ಹೊತ್ತು ಆತ್ಮೀಯವಾಗಿ ಹರಟಿದರು.

Bengaluru: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಜೆಡಿ(ಎಸ್) ಪಕ್ಷದ ರಾಜ್ಯಾಧ್ಯಕ್ಷ ಸಿ ಎಮ್ ಇಬ್ರಾಹಿಂ (CM Ibrahim) ನಡುವಿನ ದೋಸ್ತಿಗೆ ದಶಕಗಳ ಇತಿಹಾಸವಿದೆ. ಮೊದಲಿಗೆ ಇಬ್ಬರೂ ಹೆಚ್ ಡಿ ದೇವೇಗೌಡರ (HD Devegowda) ಜೊತೆ ಜೆಡಿ(ಎಸ್) ನಲ್ಲಿದ್ದರು. ಆಮೇಲೆ ಇಬ್ಬರೂ ಅದನ್ನು ತೊರೆದು ಕಾಂಗ್ರೆಸ್ ಸೇರಿದರು. ಈಗ ಸಿದ್ದರಾಮಯ್ಯ ಅಲ್ಲೇ ಇದ್ದಾರೆ ಆದರೆ ಇಬ್ರಾಹಿಂ ಮಾತ್ರ ಹೊರಬಂದು ಮತ್ತೇ ಜೆಡಿ(ಎಸ್) ಸೇರಿ ಅದರ ರಾಜ್ಯಾಧ್ಯಕ್ಷರೂ ಆಗಿದ್ದಾರೆ. ಸೋಮವಾರ ಇಬ್ರಾಹಿಂ ಅವರು ತಮ್ಮ ಮಗಳ ಮದುವೆ ಆಮಂತ್ರಣ ಪತ್ರಿಕೆ ನೀಡಲು ಸಿದ್ದರಾಮಯ್ಯನವರ ಅಧಿಕೃತ ನಿವಾಸಕ್ಕೆ ಆಗಮಿಸಿದ್ದರು. ಹಳೇ ದೋಸ್ತಿಗಳು ಸ್ವಲ್ಪ ಹೊತ್ತು ಆತ್ಮೀಯವಾಗಿ ಹರಟಿದರು.

ಇದನ್ನೂ ಓದಿ:  Shocking Video: ರಾತ್ರಿ ವೇಳೆ ಮುಂಬೈನ ಮನೆ ಅಂಗಳಕ್ಕೆ ಬಂದ ಚಿರತೆ; ಶಾಕಿಂಗ್ ವಿಡಿಯೋ ಇಲ್ಲಿದೆ