Shocking Video: ರಾತ್ರಿ ವೇಳೆ ಮುಂಬೈನ ಮನೆ ಅಂಗಳಕ್ಕೆ ಬಂದ ಚಿರತೆ; ಶಾಕಿಂಗ್ ವಿಡಿಯೋ ಇಲ್ಲಿದೆ
ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಚಿರತೆ ಬಂದಿದ್ದು ಮತ್ತು ಹೋಗಿರುವ ವಿಡಿಯೋ ಸೆರೆಯಾಗಿದ್ದು, ಇದರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಮುಂಬೈ: ಮಹಾರಾಷ್ಟ್ರದ ಮುಂಬೈನ (Mumbai) ಆರೆ ಕಾಲೋನಿಯಲ್ಲಿರುವ ಮನೆಯ ಅಂಗಳದಲ್ಲಿ ಚಿರತೆಯೊಂದು (Leopard) ಅಡ್ಡಾಡುತ್ತಿರುವ ವಿಡಿಯೋ (Video Viral) ಇದೀಗ ವೈರಲ್ ಆಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ವಿಡಿಯೋ ಜೂನ್ 1ರ ತಾರೀಖಿನದ್ದಾಗಿದ್ದು, ಅಂದು ಬೆಳಗಿನ ಜಾವ 2.43ಕ್ಕೆ ಈ ಘಟನೆ ನಡೆದಿದೆ. ಒಂದು ನಿಮಿಷ 17 ಸೆಕೆಂಡ್ ಅವಧಿಯ ಈ ವಿಡಿಯೊವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ ನಂದಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸುಶಾಂತ ನಂದಾ ಅವರ ಟ್ವೀಟ್ ವೈರಲ್ ಆಗಿದೆ.
ಈ ವೈರಲ್ ವಿಡಿಯೋ 1.6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಈ ವಿಡಿಯೋಗೆ ಪ್ರತಿಕ್ರಿಯಿಸಿದ ಟ್ವಿಟ್ಟರ್ ಬಳಕೆದಾರರು, ಕಳೆದ 50 ವರ್ಷಗಳಿಂದ ಆರೆ ಕಾಲೋನಿ ಮತ್ತು ಹತ್ತಿರದ ಪ್ರದೇಶಗಳ ಅರಣ್ಯ ಪ್ರದೇಶ ಕಡಿಮೆಯಾಗಿ, ಅಂಗಡಿ ಹಾಗೂ ಮನೆಗಳು ತಲೆಯೆತ್ತಿವೆ. ಕೈಗಾರಿಕಾ ಘಟಕಗಳು, ಅಪಾರ್ಟ್ಮೆಂಟ್, ಹೋಟೆಲ್‌ಗಳು ಇತ್ಯಾದಿಗಳು ವನ್ಯಜೀವಿಗಳ ಮೇಲೆ ಪರಿಣಾಮ ಬೀರುತ್ತಿವೆ ಎಂದಿದ್ದಾರೆ.
The original residents of Aaray colony, Mumbai, taking a stroll last night pic.twitter.com/tahXBhVzpC
— Susanta Nanda IFS (@susantananda3) July 1, 2022
ಆರೆ ಕಾಲೋನಿ ಬಳಿ ಮತ್ತು ಸುತ್ತಮುತ್ತ ಚಿರತೆಗಳು ಆಗಾಗ ಕಾಣಿಸಿಕೊಂಡಿವೆ. ಕಳೆದ ತಿಂಗಳು, ಆರೆ ಕಾಲೋನಿ ಬಳಿಯಿರುವ ಮುಂಬೈನ ಗೋರೆಗಾಂವ್‌ನಲ್ಲಿ ಚಿರತೆಯೊಂದು ಶಾಲೆಗೆ ನುಗ್ಗಿತ್ತು. ಅರಣ್ಯ ಇಲಾಖೆ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಚಿರತೆಯನ್ನು ರಕ್ಷಿಸಲಾಯಿತು.
Activity of Leopard in Aarey Milk Colony near our area is common.? Concern is we are encroaching into their habitat. Royal Palms is a housing society in Aarey Forest ? https://t.co/RcIspL0YRo
— Dipak Pujari (@PujariDipak) July 1, 2022
ಇದನ್ನೂ ಓದಿ: Shocking Video: ಬಾತ್ರೂಂನೊಳಗೆ ನುಗ್ಗಿ ಟಾಯ್ಲೆಟ್ ಪೇಪರ್ ಸುತ್ತಿಕೊಂಡ ಕಾಳಿಂಗ ಸರ್ಪ; ಶಾಕಿಂಗ್ ವಿಡಿಯೋ ಇಲ್ಲಿದೆ
ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಹೊಸ ಸರ್ಕಾರವು ಪರಿಸರ ಸೂಕ್ಷ್ಮ ಪ್ರದೇಶವಾದ ಆರೆ ಕಾಲೋನಿ ಅರಣ್ಯದಲ್ಲಿ ವಿವಾದಿತ ಮುಂಬೈ ಮೆಟ್ರೋ ಕಾರ್-ಶೆಡ್ ಅನ್ನು ಪುನರುಜ್ಜೀವನಗೊಳಿಸಲು ನಿರ್ಧರಿಸಿದ ಕೆಲವೇ ದಿನಗಳಲ್ಲಿ ಚಿರತೆ ಕಾಣಿಸಿಕೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
& there are still ppl who don’t believe #Aarey hosts wildlife. Would be interesting to see how many of those are willing to take a stroll at night in this forest. In fact there are some who even debate if Aarey is a forest!! #SaveForest to #SaveSoil
— Prasad (@PledgeGren) July 2, 2022
ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಚಿರತೆ ಬಂದಿದ್ದು ಮತ್ತು ಹೋಗಿರುವ ವಿಡಿಯೋ ಸೆರೆಯಾಗಿದ್ದು, ಇದರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
Sorry to say but they are not original resident of Aarey Colony. I have been staying in aarey colony since 60s and used move freely at odd hours but very rarely spotted them. Mostly used to see jackels. Now are spotted frequently because of easy availability of food,dogs,hens etc
— MVL (@LOHARKARMV) July 1, 2022
ಪರಿಸರವಾದಿಗಳು ಮತ್ತು ಮುಂಬೈನ ಜನರು ಆರೆ ಕಾಲೋನಿಯಲ್ಲಿ ಕಾರ್ ಶೆಡ್ ಅನ್ನು ಬಲವಾಗಿ ಪ್ರತಿಭಟಿಸಿದರು. 2019ರ ಅಕ್ಟೋಬರ್‌ನಲ್ಲಿ ದೇವೇಂದ್ರ ಫಡ್ನವಿಸ್ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದರು. ಆದರೆ, ಒಂದೇ ರಾತ್ರಿಯಲ್ಲಿ 2,000ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಯಿತು. ಇದಕ್ಕೆ ಪೊಲೀಸ್ ಬೆಂಬಲವನ್ನೂ ಪಡೆಯಲಾಗಿತ್ತು.