Viral Video: ಪಾರ್ಶ್ವವಾಯುವಿಗೆ ಒಳಗಾದ ಅಥ್ಲೀಟ್ನನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ಸಹೋದರ
ವ್ಯಕ್ತಿಯೊಬ್ಬರು ಪಾರ್ಶ್ವವಾಯುವಿಗೆ ಒಳಗಾದ ತನ್ನ ಸಹೋದರನನ್ನು ಬೆನ್ನಿನ ಮೇಲೆ ಹೊತ್ತೊಯ್ಯುತ್ತಿರುವ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿರುವವರು ಗಾಲಿಕುರ್ಚಿ ಟ್ರ್ಯಾಕ್ ಮತ್ತು ರೋಡ್ ರೇಸಿಂಗ್ ಅಥ್ಲೀಟ್ ಆಗಿದ್ದಾರೆ.
ಒಡಹುಟ್ಟಿದವರ ನಡುವಿನ ಪ್ರೀತಿಗೆ ಸಾಟಿಯಿಲ್ಲ ಯಾರೂ ಇಲ್ಲ. ಇದೊಂದು ಶುದ್ಧ ಬಂಧಗಳಲ್ಲಿ ಒಂದಾಗಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಇತರ ಸ್ನೇಹಿತರು ಬಂದು ಹೋಗಬಹುದು. ಆದರೆ ಒಡಹುಟ್ಟಿದವರ ಬಾಂಧವ್ಯವು ಶಾಶ್ವತವಾಗಿರುತ್ತದೆ. ವ್ಯಕ್ತಿಯೊಬ್ಬರು ಪಾರ್ಶ್ವವಾಯುವಿಗೆ ಒಳಗಾದ ತನ್ನ ಸಹೋದರನನ್ನು ಬೆನ್ನಿನ ಮೇಲೆ ಹೊತ್ತೊಯ್ಯುತ್ತಿರುವ ಹೃದಯಸ್ಪರ್ಶಿ ವಿಡಿಯೋ(Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯನ್ನು ಡಸ್ಟಿನ್ ಸ್ಟಾಲ್ಬರ್ಗ್ಡಿಯಸ್ ಎಂದು ಗುರುತಿಸಲಾಗಿದ್ದು, ಅವರು ಗಾಲಿಕುರ್ಚಿ ಟ್ರ್ಯಾಕ್ ಮತ್ತು ರೋಡ್ ರೇಸಿಂಗ್ ಅಥ್ಲೀಟ್ ಆಗಿದ್ದಾರೆ ಮತ್ತು ಅರಿಜೋನಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
ಒಂದು ದಿನದ ಹಿಂದೆ ಮ್ಯಾಜಿಕಲಿ ನ್ಯೂಸ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಇದುವರೆಗೆ 3.18 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹಾಗೂ 38 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. “ನಿಮ್ಮ ಸಹೋದರ ಪಾರ್ಶ್ವವಾಯುವಿಗೆ ಒಳಗಾದಾಗ ಅವರು ಯಾವುದೇ ಪ್ರಯಾಣದ ಸಾಹಸಗಳನ್ನು ತಪ್ಪಿಸಿಕೊಳ್ಳಬಾರದು ಎಂದು ನೀವು ಬಯಸುತ್ತೀರಿ” ಎಂದು ವಿಡಿಯೋದಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: Viral Video: ಚಬಾ ಚಂಡಮಾರುತಕ್ಕೆ ಮುಳುಗಿದ ಹಡಗು, ನಾವಿಕರನ್ನು ರಕ್ಷಿಸುವ ರೋಚಕ ವಿಡಿಯೋ ವೈರಲ್
View this post on Instagram
ವಿಡಿಯೋದಲ್ಲಿ ಇರುವಂತೆ, ವ್ಯಕ್ತಿಯು ತನ್ನ ಹೆಗಲ ಮೇಲೆ ಪಾಶ್ವವಾಯುಗೆ ಒಳಗಾಗಿರುವ ಸಹೋದರನನ್ನು ಹೊತ್ತುಕೊಂಡು ಮರಳು ದಿಬ್ಬದ ಮೇಲೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ವಿಡಿಯೋ ಹಂಚಿಕೊಳ್ಳುವಾಗ “ಅವನು ಭಾರವಲ್ಲ, ಅವನು ನನ್ನ ಸಹೋದರ. ಜೀವನಕ್ಕಾಗಿ ಪ್ರಯಾಣಿಸುವ ಸ್ನೇಹಿತರು, ”ಎಂದು ಶೀರ್ಷಿಕೆ ನೀಡಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಪಡೆದಿದ್ದು, ಸಹೋದರರ ನಡುವಿನ ಪ್ರೀತಿ ಮತ್ತು ಸಹಾನುಭೂತಿಯನ್ನು ಶ್ಲಾಘಿಸಿ ಹಲವಾರು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
“ನಾನು ಪಾರ್ಶ್ವವಾಯುವಿಗೆ ಒಳಗಾಗಿದ್ದೇನೆ. ಇದನ್ನು ನೋಡುವುದೇ ನಿಜವಾದ ಆಶೀರ್ವಾದ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. “ನೀವು ನಿಮ್ಮ ಮಕ್ಕಳನ್ನು ‘ಪ್ರೀತಿ ಮತ್ತು ಸಹಾನುಭೂತಿಯಿಂದ’ ಬೆಳೆಸಿದರೆ ನೀವು ಉತ್ತಮ ಕೆಲಸವನ್ನು ಮಾಡಿದ್ದೀರಿ ಎಂದು ನಾನು ಯಾವಾಗಲೂ ಹೇಳುತ್ತೇನೆ” ಎಂದು ಮತ್ತೊಬ್ಬ ಇನ್ಸ್ಟಾಗ್ರಾಮ್ ಬಳಕೆದಾರ ಹೇಳಿದ್ದಾರೆ.
Published On - 7:16 pm, Sun, 3 July 22