ಮೈಸೂರಿನ ಮೈಲಾರಿ ಹೋಟೆಲ್​ಗೆ ಮತ್ತೊಮ್ಮೆ ತೆರಳಿ ಇಡ್ಲಿ, ದೋಸೆ ಸವಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರಿನ ಮೈಲಾರಿ ಹೋಟೆಲ್​ಗೆ ಮತ್ತೊಮ್ಮೆ ತೆರಳಿ ಇಡ್ಲಿ, ದೋಸೆ ಸವಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 01, 2025 | 2:21 PM

ಹಿಂದೊಮ್ಮೆ ಸಿದ್ದರಾಮಯ್ಯನವರೇ ಹೇಳಿದಂತೆ ಕಾಲೇಜಿನಲ್ಲಿ ಓದುವ ದಿನಗಳಲ್ಲೂ ಅವರು ಮೈಲಾರಿ ಹೋಟೆಲ್ ಗೆ ಬಂದು ತಿಂಡಿ ಮೆಲ್ಲುತ್ತಿದ್ದರಂತೆ. ಆಗೆಲ್ಲ 8 ಪೈಸೆ, 10 ಪೈಸೆಗೆ ದೋಸೆ ಸಿಗುತಿತ್ತು ಅಂತ ಅವರು ಹೇಳುತ್ತಾರೆ. ಮೈಲಾರಿ ಹೋಟೆಲ್ ದೋಸೆ ಮೇಲೆ ಬೆಣ್ಣೆ ಇರೋದನ್ನು ಗಮನಿಸಬಹುದು. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತದೆ ಅಂತ ಬೆಣ್ಣೆ ಮತ್ತು ತುಪ್ಪ ತಿನ್ನಲ್ಲ ಅಂತ ಹಿಂದೆ ಸಿದ್ದರಾಮಯ್ಯ ಹೇಳಿದ್ದುಂಟು.

ಮೈಸೂರು: ನಗರದಲ್ಲಿರುವ ಮೈಲಾರಿ ಹೋಟೆಲ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಅವಿನಾಭಾವ ಸಂಬಂಧ. ನಗರಕ್ಕೆ ಭೇಟಿ ನೀಡಿದಾಗಲೆಲ್ಲ ಅವರು ಈ ಹೋಟೆಲ್ ಗೆ ಹೋಗಿ ತಿಂಡಿ ಸವಿಯುತ್ತಾರೆ. ನಾಡಿನ ಮುಖ್ಯಮಂತ್ರಿಯಾಗಿದ್ದರೂ ಒಬ್ಬ ಜನಸಾಮಾನ್ಯನ ಹಾಗೆ ಅವರು ಮೈಲಾರಿ ಹೋಟೆಲ್​ಗೆ ಬರುತ್ತಾರೆ. ಇವತ್ತು ಸಿಎಂ ಜೊತೆ ಅವರ ಪುತ್ರ ಮತ್ತು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಇದ್ದರು. ಹೋಟೆಲ್ ನವರು ಮುಖ್ಯಮಂತ್ರಿಯವರನ್ನು ಪ್ರೀತಿಯಿಂದ ಬರಮಾಡಿಕೊಂಡು ಬಹಳ ಆಸ್ಥೆಯಿಂದ ತಿಂಡಿಗಳನ್ನು ಸರ್ವ್ ಮಾಡುತ್ತಾರೆ. ಸಿದ್ದರಾಮಯ್ಯ ಮೊದಲಿಗೆ ಇಡ್ಲಿ ನಂತರ ದೋಸೆ ತಿಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೈಸೂರಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದೋಸೆ ತಿನ್ನಲು ಮೈಲಾರಿ ಹೋಟೆಲ್​ಗೆ ಹೋಗದಿರುತ್ತಾರೆಯೇ?