ಮೈಸೂರು ಮೈಲಾರಿ ಹೋಟೆಲ್​ನ ಮಸಾಲೆ ದೋಸೆ ಬಿಡಲೊಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ!

|

Updated on: May 25, 2024 | 1:34 PM

ಗಮನಿಸಬೇಕಾದ ಸಂಗತಿಯೆಂದರೆ ಅವರು ಜನಸಾಮಾನ್ಯರ ಹಾಗೆ ಹೋಟೆಲ್ ಟೇಬಲ್ ಗೆ ಕುಳಿತು ತಿಂಡಿ ಸೇವಿಸುತ್ತಿದ್ದಾರೆ. ಇದು ಅವರಿಗೆ ಈ ಹೋಟೆಲ್ ಮತ್ತು ಇಲ್ಲಿ ಸಿಗುವ ಸ್ವಾದಿಷ್ಟ ತಿಂಡಿಗಳ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ಅವರ ಬಲಭಾಗ ಮತ್ತು ಮುಂಭಾಗದಲ್ಲಿ ಜನ ತಮ್ಮ ಪಾಡಿಗೆ ತಾವು ತಮಗಿಷ್ಟದ ತಿಂಡಿ ಪದಾರ್ಥಗಳನ್ನು ತಿನ್ನುತ್ತಿದ್ದಾರೆ.

ಮೈಸೂರು: ನಗರದ ಮೈಲಾರಿ ಹೋಟೆಲ್ (Mylari hotel) ಮಸಾಲೆ ದೋಸೆ ಮೇಲೆ ಅದೆಂಥ ಪ್ರೀತಿ, ವ್ಯಾಮೋಹ, ಆಸೆ ಮುಖ್ಯಮಂತ್ರಿ ಸಿದ್ದರಾಯ್ಯನವರಿಗೆ (CM Siddaramaiah)? ನಿನ್ನೆ ಅವರು ಮೈಲಾರಿ ಹೋಟೆಲ್​ನಲ್ಲಿ ತಿಂಡಿ ತಿಂದ ವಿಷಯವನ್ನು ನಾವು ನಿಮಗೆ ಹೇಳಿದ್ದೆವು. ಇವತ್ತು ಅವರು ಪುನಃ ಮೈಲಾರಿ ಹೋಟೆಲ್ ಗೆ ಹೋಗಿ ಮತ್ತೊಮ್ಮೆ ಮಸಾಲೆ ದೋಸೆ ಸವಿದರು. ಸಚಿವ ಕೆ ವೆಂಕಟೇಶ್ (K Venkatesh) ಜೊತೆ ಅವರು ತಿಂಡಿ ತಿನ್ನುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅದರೆ ನಿನ್ನೆ ಮತ್ತು ಇವತ್ತಿನ ದೃಶ್ಯಗಳಲ್ಲಿ ಒಂದು ವ್ಯತ್ಯಾಸವಿದೆ. ಶುಕ್ರವಾರ ಅವರು ಮೈಲಾರಿ ಹೋಟೆಲ್ ನ ನಜರ್​ಬಾದ್ ಬ್ರ್ಯಾಂಚ್​ನಲ್ಲಿ ತಿಂಡಿ ತಿಂದಿದ್ದರೆ ಇವತ್ತು ಅಗ್ರಹಾರದಲ್ಲಿರುವ ಶಾಖೆಯಲ್ಲಿ. ಗಮನಿಸಬೇಕಾದ ಸಂಗತಿಯೆಂದರೆ ಅವರು ಜನಸಾಮಾನ್ಯರ ಹಾಗೆ ಹೋಟೆಲ್ ಟೇಬಲ್ ಗೆ ಕುಳಿತು ತಿಂಡಿ ಸೇವಿಸುತ್ತಿದ್ದಾರೆ. ಇದು ಅವರಿಗೆ ಈ ಹೋಟೆಲ್ ಮತ್ತು ಇಲ್ಲಿ ಸಿಗುವ ಸ್ವಾದಿಷ್ಟ ತಿಂಡಿಗಳ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ಅವರ ಬಲಭಾಗ ಮತ್ತು ಮುಂಭಾಗದಲ್ಲಿ ಜನ ತಮ್ಮ ಪಾಡಿಗೆ ತಾವು ತಮಗಿಷ್ಟದ ತಿಂಡಿ ಪದಾರ್ಥಗಳನ್ನು ತಿನ್ನುತ್ತಿದ್ದಾರೆ. ನಮ್ಮ ಮೈಸೂರು ವರದಿಗಾರ ನೀಡಿರುವ ಮಾಹಿತಿ ಪ್ರಕಾರ ತಿಂಡಿ ತಿಂದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ತೆರಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೈಸೂರು ಮೈಲಾರಿ ಹೋಟೆಲ್​ನಲ್ಲಿ ದೋಸೆ ಹಾಕಿದ ಪ್ರಿಯಾಂಕಾ ಗಾಂಧಿ, ನಂತರ ತಾವೊಂದು ತಿಂದು ಮತ್ತೊಂದು ಡಿಕೆ ಶಿವಕುಮಾರ್​​ ತಟ್ಟೆಗೆ ಹಾಕಿದರು!