ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ ಇಲ್ಲಿದೆ ನೋಡಿ

Updated By: Ganapathi Sharma

Updated on: Jul 03, 2025 | 2:16 PM

ಸಿಎಂ ಸಿದ್ದರಾಮಯ್ಯ ಅವರಿಂದ ಅವಮಾನಕ್ಕೊಳಗಾಗಿ ಸ್ವಯಂ ನಿವೃತ್ತಿಗೆ ಪತ್ರ ಬರೆದಿದ್ದ ಧಾರವಾಡ ಎಎಸ್​ಪಿ ನಾರಾಯಣ ಭರಮನಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ್ದಾರೆ. ಬುಧವಾರ ಕರ್ತವ್ಯಕ್ಕೂ ಹಾಜರಾಗುವ ಮುನ್ನ ಮಾತನಾಡಿದ ಅವರು, ಸಿಎಂ ಹಾಗೂ ಗೃಹಸಚಿವರು ಮಾತನಾಡಿದ್ದಾರೆ ಎಂದಿದ್ದಾರೆ. ಎಎಸ್​ಪಿ ನಾರಾಯಣ ಭರಮನಿ ಪ್ರತಿಕ್ರಿಯೆಯ ವಿಡಿಯೋ ಇಲ್ಲಿದೆ.

ಧಾರವಾಡ, ಜುಲೈ 3: ಸಿಎಂ ಸಿದ್ದರಾಮಯ್ಯ ಅವರು ಸಾರ್ವಜನಿಕವಾಗಿ ಹೊಡೆಯಲು ಕೈಎತ್ತಿದ್ದ ಪ್ರಕರಣ ಸಂಬಂಧ ಸ್ವಯಂನಿವೃತ್ತಿ ಕೋರಿ ಸರ್ಕಾರಕ್ಕೆ ಮನವಿ ಮಾಡಿರುವ ಧಾರವಾಡ ಎಎಸ್​ಪಿ ನಾರಾಯಣ ಭರಮನಿ ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಗುರುವಾರ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಮಾಧ್ಯಮ ಪ್ರತಿನಿಧಿಗಳ ಬಳಿ ಮಾತನಾಡಿದ ಅವರು, ನನ್ನ ಮನಸಿನ ಭಾವನೆಗಳನ್ನು ಮೇಲಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ತಿಳಿಯಪಡಿಸಿದ್ದೇನೆ. ಮೇಲಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಸಿಎಂ ಹಾಗೂ ಗೃಹ ಸಚಿವರು ಮಾತನಾಡಿದ್ದಾರೆ. ಮುಂದಿನ ನಿರ್ಧಾರ ಸರ್ಕಾರ ಕೈಗೊಳ್ಳುತ್ತದೆ. ಈಗ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಹೊಡೆಯಲು ಕೈಎತ್ತಿದ್ದ ಎಎಸ್​ಪಿ ಭರಮನಿ ಸ್ವಯಂ ನಿವೃತ್ತಿ ಪತ್ರದ ಭಾವುಕ ಸಾಲುಗಳು ಇಲ್ಲಿವೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ