ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವಾಗಿಸಲು ಮುಖ್ಯಮಂತ್ರಿ ಮತ್ತು ನಾನು ಪಣತೊಟ್ಟಿದ್ದೇವೆ: ಜಿ ಪರಮೇಶ್ವರ್

ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವಾಗಿಸಲು ಮುಖ್ಯಮಂತ್ರಿ ಮತ್ತು ನಾನು ಪಣತೊಟ್ಟಿದ್ದೇವೆ: ಜಿ ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: May 21, 2024 | 1:21 PM

ಪೊಲೀಸ್ ವ್ಯವಸ್ಥೆಯಲ್ಲಿ ಡ್ರಗ್ಸ್ ಮಾರಾಟ, ಪೂರೈಕೆಯನ್ನು ತಡೆಯಲು ಒಂದು ಪ್ರತ್ಯೇಕ ವಿಭಾಗ ಸ್ಥಾಪಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು. ಸಾವಿರಾರು ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಲಾಗಿದೆ ಮತ್ತು ಬೆಂಗಳೂರಲ್ಲಿ ಬೀಡು ಬಿಟ್ಟಿದ್ದ ಹಲವಾರು ಡ್ರಗ್ ಪೆಡ್ಲರ್ ಗಳನ್ನು ವಶಕ್ಕೆ ಪಡೆದು ಡಿಪೋರ್ಟ್ ಮಾಡಲಾಗಿದೆ ಎಂದು ಪರಮೇಶ್ವರ್ ಹೇಳಿದರು.

ಬೆಂಗಳೂರು: ರವಿವಾರ ರಾತ್ರಿ ನಗರದ ಹೊರವಲುಯದಲ್ಲರವ ಫಾರ್ಮ್ ಹೌಸೊಂದರಲ್ಲಿ ರೇವ್ ಪಾರ್ಟಿ (rave party) ಆಯೋಜಿಸಲಾಗಿತ್ತು ಮತ್ತು ಅದರಲ್ಲಿ ತೆಲುಗು ನಟ ನಟಿಯರು ಸೇರಿದಂತೆ ಕೆಲ ಸೆಲಿಬ್ರಿಟಿಗಳು ಕೂಡ ಭಾಗಿಯಾಗಿದ್ದರು. ಪ್ರಕರಣದ ಬಗ್ಗೆ ಇಂದು ನಗರದಲ್ಲಿ ಬ್ರೀಫ್ ಮಾಡಿದ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಅವರು, ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಸೆಲಿಬ್ರಿಟಿಗಳ ಮಾಹಿತಿಯನ್ನು ರೇಡ್ ಮಾಡಿದ ಪೊಲೀಸರು ಕಲೆ ಹಾಕುತ್ತಿದ್ದಾರೆ, ಪಾರ್ಟಿ ನಡೆಯುತ್ತಿದ್ದ ಸ್ಥಳದಲ್ಲಿ ಅಲ್ಲ ಪ್ರಮಾಣದ ಡ್ರಗ್ಸ್ (drugs) ಕೂಡ ಪತ್ತೆಯಾಗಿವೆ, ಅವು ಎಲ್ಲಿಂದ ಬಂದವು ಅನ್ನೋದರ ತನಿಖೆಯಾಗಬೇಕಿದೆ ಎಂದರು. ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವಾಗಿಸಲು ಮುಖ್ಯಮಂತ್ರಿ ಮತ್ತು ತಾವು ಪಣತೊಟ್ಟಿರುವುದಾಗಿ ಹೇಳಿದ ಪರಮೇಶ್ವರ್ ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ಹೊರರಾಜ್ಯಗಳಿಂದ ಬರುವ ಮಾದಕ ವಸ್ತುಗಳನ್ನು ಬರಾಮತ್ತು ಮಾಡಿಕೊಂಡು ನಾಶಪಡಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಪೊಲೀಸ್ ವ್ಯವಸ್ಥೆಯಲ್ಲಿ ಡ್ರಗ್ಸ್ ಮಾರಾಟ, ಪೂರೈಕೆಯನ್ನು ತಡೆಯಲು ಒಂದು ಪ್ರತ್ಯೇಕ ವಿಭಾಗ ಸ್ಥಾಪಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು. ಸಾವಿರಾರು ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಲಾಗಿದೆ ಮತ್ತು ಬೆಂಗಳೂರಲ್ಲಿ ಬೀಡು ಬಿಟ್ಟಿದ್ದ ಹಲವಾರು ಡ್ರಗ್ ಪೆಡ್ಲರ್ ಗಳನ್ನು ವಶಕ್ಕೆ ಪಡೆದು ಡಿಪೋರ್ಟ್ ಮಾಡಲಾಗಿದೆ ಎಂದು ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಅಂಜಲಿ ತಂಗಿಗೆ ಶಿಕ್ಷಣ, ಮನೆ ಮತ್ತು ನೌಕರಿಯ ಭರವಸೆ ನೀಡಿರುವ ಗೃಹ ಸಚಿವ ಜಿ ಪರಮೇಶ್ವರ್