ಆಲಮಟ್ಟಿ ಜಲಾಶಯದಲ್ಲಿ ಬಾಗಿನ ಅರ್ಪಿಸುವ ಮೊದಲು ತೋರಣಗಲ್ ಏರ್ ಸ್ಟ್ರಿಪ್ ನಲ್ಲಿ ಉಪಹಾರ ಸೇವಿಸಿದ ಸಿದ್ದರಾಮಯ್ಯ

|

Updated on: Sep 02, 2023 | 2:53 PM

ಮುಖ್ಯಮಂತ್ರಿ ಕಲ್ಲಂಗಡಿ ಹಣ್ಣು ಸವಿಯುವುದರಲ್ಲಿ ಮಗ್ನರಾಗಿದ್ದರೆ, ಮತ್ತೊಂದು ಬಿದಿರಿನ ಸೋಫಾದಲ್ಲಿ ಶಿವಕುಮಾರ್ ಜೊತೆ ಕೂತಿರುವ ಪಾಟೀಲ್ ಅಧಿಕಾರಿಯೊಬ್ಬರಿಗೆ ಏನೋ ಹೇಳುತ್ತಿದ್ದಾರೆ. ಅವರು ಮಾತಾಡುವ ಶೈಲಿ ಬಯ್ಯುವಂತೆ ಗೋಚರಿಸುವುದರಿಂದ ಅಧಿಕಾರಿಯೊಂದಿಗೆ ಮಾತಾಡುತ್ತಿದ್ದಾರೋ ಅಥವಾ ರೇಗುತ್ತಿದ್ದಾರೋ ಅಂತ ಗೊತ್ತಾಗುತ್ತಿಲ್ಲ ಮಾರಾಯ್ರೇ.

ಬಳ್ಳಾರಿ: ಅಲಮಟ್ಟಿ ಜಲಾಶಯದಲ್ಲಿ ಕೃಷ್ಣಾನದಿಗೆ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಸಚಿವ ಎಂಬಿ ಪಾಟೀಲ್ (MB Patil) ಮತ್ತು ಇತರ ಗಣ್ಯರು ತೋರಣಗಲ್ ನಲ್ಲಿನ ಜಿಂದಾಲ್ ಏರ್​ಸ್ಟ್ರಿಪ್​ನಲ್ಲಿ (Jindal Airstrip) ಲಘು ಉಪಹಾರ ಸೇವಿಸಿದರು. ಬಳ್ಳಾರಿ ಉಸ್ತುವಾರಿ ಸಚಿವ ಬಿ ನಾಗೇಂದ್ರ ಮತ್ತು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಬೆಂಗಳೂರಿಂದ ಆಗಮಿಸಿದ ನಾಯಕರನ್ನು ಸ್ವಾಗತಿಸಿದರು. ಸಿದ್ದರಾಮಯ್ಯ ಮುಂದೆ ಇರುವ ಟೀಪಾಯ್ ಮೇಲೆ ಕಲ್ಲಂಗಡಿ ಹಣ್ಣು, ಬಿಸ್ಕತ್ತು ಮತ್ತು ತಿಂಡಿಗಳನ್ನು ಇಡಲಾಗಿದೆ. ಮುಖ್ಯಮಂತ್ರಿ ಕಲ್ಲಂಗಡಿ ಹಣ್ಣು ಸವಿಯುವುದರಲ್ಲಿ ಮಗ್ನರಾಗಿದ್ದರೆ, ಮತ್ತೊಂದು ಬಿದಿರಿನ ಸೋಫಾದಲ್ಲಿ ಶಿವಕುಮಾರ್ ಜೊತೆ ಕೂತಿರುವ ಪಾಟೀಲ್ ಅಧಿಕಾರಿಯೊಬ್ಬರಿಗೆ ಏನೋ ಹೇಳುತ್ತಿದ್ದಾರೆ. ಅವರು ಮಾತಾಡುವ ಶೈಲಿ ಬಯ್ಯುವಂತೆ ಗೋಚರಿಸುವುದರಿಂದ ಅಧಿಕಾರಿಯೊಂದಿಗೆ ಮಾತಾಡುತ್ತಿದ್ದಾರೋ ಅಥವಾ ರೇಗುತ್ತಿದ್ದಾರೋ ಅಂತ ಗೊತ್ತಾಗುತ್ತಿಲ್ಲ ಮಾರಾಯ್ರೇ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ