ವಿಜಯಪುರ: ಮಾಧ್ಯಮ ಪ್ರತಿನಿಧಿಗಳು ಈಶ್ವರಪ್ಪ ಬಗ್ಗೆ ಪ್ರಶ್ನಿಸಿದಾಗ ಸಿದ್ದರಾಮಯ್ಯ ಸೇರಿ ಎಲ್ಲ ಗಣ್ಯರು ಜೋರಾಗಿ ನಕ್ಕರು!

|

Updated on: Sep 02, 2023 | 6:12 PM

ಮಾಧ್ಯಮ ಪ್ರತಿನಿಧಿ ಸಿದ್ದರಾಮಯ್ಯ ಕಡೆ ತಿರುಗಿ, ಈಶ್ವರಪ್ಪ ಸರ್ಕಾರ ಬಿದ್ಹೋಗುತ್ತೆ ಅಂತ ಹೇಳಿದ್ದಾರಲ್ಲ ಅಂದಾಗ ಗಣ್ಯರು ಪುನಃ ನಗುತ್ತಾರೆ. ‘ಈಶ್ವರಪ್ಪ ಅದ್ಯಾವುದೋ ಭ್ರಮೆಯಲ್ಲಿದ್ದಾರೆ’ ಅಂತ ಹೇಳುತ್ತಾ ಸಿದ್ದರಾಮಯ್ಯ ಅಲ್ಲಿಂದ ಹೆಜ್ಜೆ ಹಾಕುತ್ತಾರೆ. ಸಚಿವರಾದ ಕೃಷ್ಣ ಭೈರೇಗೌಡ, ಶಿವಾನಂದ ಪಾಟೀಲ್ ಮತ್ತು ಸಂಸದರು-ರಮೇಶ್ ಜಿಗಜಿಣಗಿ ಮತ್ತು ಪಿಸಿ ಗದ್ದಿಗೌಡರ್ ಅವರನ್ನು ಸಹ ವಿಡಿಯೋದಲ್ಲಿ ನೋಡಬಹುದು.

ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು ಆಲಮಟ್ಟಿ ಡ್ಯಾಂನಲ್ಲಿ ಕೃಷ್ಣಾ ನದಿಗೆ ಗಂಗಾಪೂಜೆ ಸಲ್ಲಿಸಿದ ಬಳಿಕ ಬಾಗಿನ (Bagina) ಅರ್ಪಿಸಿದರು. ಆಮೇಲೆ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿಯ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾ ಗೋಷ್ಟಿಯಲ್ಲಿ ಮಾತಾಡಿದರು. ಗೋಷ್ಟಿಯ ಅಂತ್ಯದಲ್ಲಿ ಶಿವಕುಮಾರ್ ರೋಡ್ ಮ್ಯಾಪ್ ತಯಾರಿ ಮಾಡಿದ್ದೇವೆ ಅಂತ ಹೇಳಿದ ನಂತರ ಎಲ್ಲರೂ ಎದ್ದಾಗ ಪತ್ರಕರ್ತರೊಬ್ಬರು ಕೆ ಎಸ್ ಈಶ್ವರಪ್ಪ ನೀಡಿರುವ ಹೇಳಿಕೆ ಬಗ್ಗೆ ಪ್ರಶ್ನೆಯೊಂದನ್ನು ಕೇಳುತ್ತಾರೆ. ಅದಕ್ಕೆ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ನಗುತ್ತಾರೆ. ಶಿವಕುಮಾರ್ ಪತ್ರಕರ್ತನಿಗೆ ಈಶ್ವರಪ್ಪ ಬಗ್ಗೆ ಕೇಳೋದಾದ್ರೆ ಮುಖ್ಯಮಂತ್ರಿಯವರನ್ನು ಕೇಳಿ ಅನ್ನುತ್ತಾರೆ. ಆಗ ಮಾಧ್ಯಮ ಪ್ರತಿನಿಧಿ ಸಿದ್ದರಾಮಯ್ಯ ಕಡೆ ತಿರುಗಿ, ಈಶ್ವರಪ್ಪ ಸರ್ಕಾರ ಬಿದ್ಹೋಗುತ್ತೆ ಅಂತ ಹೇಳಿದ್ದಾರಲ್ಲ ಅಂದಾಗ ಗಣ್ಯರು ಪುನಃ ನಗುತ್ತಾರೆ. ‘ಈಶ್ವರಪ್ಪ ಅದ್ಯಾವುದೋ ಭ್ರಮೆಯಲ್ಲಿದ್ದಾರೆ’ ಅಂತ ಹೇಳುತ್ತಾ ಸಿದ್ದರಾಮಯ್ಯ ಅಲ್ಲಿಂದ ಹೆಜ್ಜೆ ಹಾಕುತ್ತಾರೆ. ಸಚಿವರಾದ ಕೃಷ್ಣ ಭೈರೇಗೌಡ, ಶಿವಾನಂದ ಪಾಟೀಲ್ ಮತ್ತು ಸಂಸದರು-ರಮೇಶ್ ಜಿಗಜಿಣಗಿ ಮತ್ತು ಪಿಸಿ ಗದ್ದಿಗೌಡರ್ ಅವರನ್ನು ಸಹ ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ