ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಮತದಾನದ ಹಕ್ಕು ಚಲಾಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

|

Updated on: Apr 26, 2024 | 12:30 PM

ಜನಜಂಗುಳಿ ಮತ್ತು ಜನರ ತಳ್ಳಾಟ ಹಾಗೂ ನೂಕಾಟ ನಿಯಂತ್ರಿಸಲು ಮುಖ್ಯಮಂತ್ರಿಯವರ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಸ್ವಲ್ಪ ಕಷ್ಟಪಡಬೇಕಾಯಿತು. ಮತ ಚಲಾಯಿಸಿ ಹೊರಬಂದ ಬಳಿಕ ಸಿದ್ದರಾಮಯ್ಯ ಮತ್ತು ಯತೀಂದ್ರ ಜನರಿಗೆ ತಮ್ಮ ಬೆರಳುಗಳ ಮೇಲಿನ ಇಂಕ್ ಮಾರ್ಕ್ ತೋರಿಸಿದರು. ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮೇ 6 ರಂದು ನಡೆಯಲಿದೆ.

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಅವರ ಮಗ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಇಂದು ಚಾಮರರಾಜನಗರ ಲೋಕಸಭಾ ಕ್ಷೇತ್ರ (Chamarajanagar LS seat) ವ್ಯಾಪ್ತಿ ಮತ್ತು ವರುಣಾ ವಿಧಾನಸಭಾ ಕ್ಷೇತ್ರದ ಭಾಗವಾಗಿರುವ ಸಿದ್ದರಾಮನಹುಂಡಿಯಲ್ಲಿ ಮತ ಚಲಾಯಿಸಿದರು. ಲೋಕಸಭಾ ಚುನಾವಣೆಗೆ ಇಂದು ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ತಮ್ಮ ಬೆಂಗಾವಲು ಪಡೆಯೊಂದಿಗೆ ವಾಹನದಲ್ಲಿ ಬಂದ ಸಿದ್ದರಾಮಯ್ಯರನ್ನು ನೋಡಿದಾಗ ವೋಟು ಮಾಡಲು ಬಂದಿದ್ದಾರೋ ಇಲ್ಲ ಚುನಾವಣಾ ಪ್ರಚಾರಕ್ಕೆ ಬಂದಿದ್ದ್ದಾರೋ ಎಂಬ ಅನುಮಾನ ಮೂಡಿತು. ಮತಗಟ್ಟೆಯ ಬಳಿ ನೆರೆದಿದ್ದ ಜನ ಅವರನ್ನು ನೋಡಿದ ಕೂಡಲೇ ಘೋಷಣೆಗಳನ್ನು ಕೂಗಲಾರಂಭಿಸಿದರು. ಜನಜಂಗುಳಿ ಮತ್ತು ಜನರ ತಳ್ಳಾಟ ಹಾಗೂ ನೂಕಾಟ ನಿಯಂತ್ರಿಸಲು ಮುಖ್ಯಮಂತ್ರಿಯವರ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಸ್ವಲ್ಪ ಕಷ್ಟಪಡಬೇಕಾಯಿತು. ಮತ ಚಲಾಯಿಸಿ ಹೊರಬಂದ ಬಳಿಕ ಸಿದ್ದರಾಮಯ್ಯ ಮತ್ತು ಯತೀಂದ್ರ ಜನರಿಗೆ ತಮ್ಮ ಬೆರಳುಗಳ ಮೇಲಿನ ಇಂಕ್ ಮಾರ್ಕ್ ತೋರಿಸಿದರು. ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮೇ 6 ರಂದು ನಡೆಯಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹತ್ಯೆಯಾದ ನೇಹಾ ಮನೆಗೆ ಸಿಎಂ ಭೇಟಿ, ನಿರಂಜನ್ ಮನವಿಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು?

Follow us on