ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಉಮಾಶ್ರೀ ಸೂಟ್ ಕೇಸ್ ತೆಗೆದುಕೊಳ್ಳುವಾಗ ಸಿಎಂ ಸಿದ್ದರಾಮಯ್ಯರಿಂದ ಹಾಸ್ಯ ಚಟಾಕಿ!
ಸಂಪ್ರದಾಯದಂತೆ ಸೂಟ್ ಕೇಸನ್ನು ಉಮಾಶ್ರೀ ಅವರಿಗೆ ಹೊರಟ್ಟಿನೀಡಿದಾಗ ಅದನ್ನು ಭದ್ರವಾಗಿ ಹಿಡಿದುಕೊಳ್ಳಬೇಕು ಅಂತ ಸಿದ್ದರಾಮಯ್ಯ ಜೋಕ್ ಮಾಡಿದರು. ಅವರು ಹೇಳಿದ್ದನ್ನು ಕೇಳಿಸಿಕೊಂಡ ಉಮಾಶ್ರೀ ಅದೇ ಸೂಟ್ ಕೇಸ್ ಗೆ ಹಣೆಹಚ್ಚಿ ನಕ್ಕರು. ನಿಮಗೆ ನೆನಪಿರಬಹುದು, ಜಗದೀಶ್ ಶೆಟ್ಟರ್ ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದಾಗಲೂ ಸಿದ್ದರಾಮಯ್ಯ ಸೂಟ್ ಕೇಸ್ ಗೆ ಸಂಬಂಧಿಸಿದಂತೆ ಜೋಕ್ ಮಾಡಿದ್ದರು.
ಬೆಂಗಳೂರು: ಉಮಾಶ್ರೀ, (Umashree) ಎಂಆರ್ ಸೀತಾರಾಂ (MR Sitaram) ಮತ್ತು ಹೆಚ್ ಪಿ ಸುಧಾಮದಾಸ್ (KP Sudhamadas) ಇಂದು ನೂತನ ವಿಧಾನ ಪರಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಖ್ಯಾತ ಹಿರಿಯ ನಟಿ ಮತ್ತು ಮಾಜಿ ಸಚಿವೆಯೂ ಆಗಿರುವ ಉಮಾಶ್ರೀ ಕಲಾವಿದರ ಕೋಟಾದಡಿ ವಿಧಾನ ಪರಿಷತ್ ನಾಮ ನೀರ್ದೇಶನಗೊಂಡಿದ್ದಾರೆ. ವಿಧಾನ ಸೌಧದಲ್ಲಿ ಗುರುವಾರ ನಡೆದ ಸರಳ ಸಮಾರಂಭವೊಂದರಲ್ಲಿ ಉಮಾಶ್ರೀ, ಸೀತಾರಾಂ ಮತ್ತು ಸುಧಾಮದಾಸ್ ಅವರಿಗೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಪ್ರಮಾಣ ವಚನ ಬೋಧಿಸಿದರು. ಉಮಾಶ್ರೀ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಭಾಪತಿ ಹೊರಟ್ಟಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬೋಕೆಗಳನ್ನು ನೀಡಿ ಅಭಿನಂದಿಸಿದರು. ನಂತರ ಹೊರಟ್ಟಿ, ಸಂಪ್ರದಾಯದಂತೆ ಸೂಟ್ ಕೇಸನ್ನು ಉಮಾಶ್ರೀ ಅವರಿಗೆ ನೀಡಿದಾಗ ಅದನ್ನು ಭದ್ರವಾಗಿ ಹಿಡಿದುಕೊಳ್ಳಬೇಕು ಅಂತ ಸಿದ್ದರಾಮಯ್ಯ ಜೋಕ್ ಮಾಡಿದರು. ಅವರು ಹೇಳಿದ್ದನ್ನು ಕೇಳಿಸಿಕೊಂಡ ಉಮಾಶ್ರೀ ಅದೇ ಸೂಟ್ ಕೇಸ್ ಗೆ ಹಣೆಹಚ್ಚಿ ನಕ್ಕರು. ನಿಮಗೆ ನೆನಪಿರಬಹುದು, ಜಗದೀಶ್ ಶೆಟ್ಟರ್ ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದಾಗಲೂ ಸಿದ್ದರಾಮಯ್ಯ ಸೂಟ್ ಕೇಸ್ ಗೆ ಸಂಬಂಧಿಸಿದಂತೆ ಜೋಕ್ ಮಾಡಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ