ದೆಹಲಿಯಲ್ಲಿ ಇಂಗ್ಲಿಷ್ ಮಾಧ್ಯಮದ ವರದಿಗಾರ್ತಿಯೊಂದಿಗೆ ಸಿಎಂ ಸಿದ್ದರಾಮಯ್ಯ ಅದ್ಯಾಕೆ ಮಾತಾಡಲಿಲ್ಲವೋ?

ದೆಹಲಿಯಲ್ಲಿ ಇಂಗ್ಲಿಷ್ ಮಾಧ್ಯಮದ ವರದಿಗಾರ್ತಿಯೊಂದಿಗೆ ಸಿಎಂ ಸಿದ್ದರಾಮಯ್ಯ ಅದ್ಯಾಕೆ ಮಾತಾಡಲಿಲ್ಲವೋ?

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 19, 2024 | 6:14 PM

ಈ ಸಂದರ್ಭದಲ್ಲೇ ಕೋಪದ ಮುಖಭಾವದೊಂದಿಗೆ ಸಿದ್ದರಾಮಯ್ಯ ಎಐಸಿಸಿ ಕಚೇರಿಗೆ ಬಂದಾಗ ಇಂಗ್ಲಿಷ್ ಮತ್ತು ಕನ್ನಡ ಪತ್ರಕರ್ತರು ಅವರನ್ನು ಮುಕ್ಕುರಿದರು. ಕನ್ನಡದ ಮಾಧ್ಯಮಗಳ ವರದಿಗಾರರು ಅವರಿಗೆ ಪ್ರಶ್ನೆ ಕೇಳುವ ಪ್ರಯತ್ನ ಮಾಡಲಿಲ್ಲ, ಆದರೆ ಇಂಗ್ಲಿಷ್ ಚ್ಯಾನೆಲ್ ವರದಿಗಾರ್ತಿಯೊಬ್ಬರು ಪ್ರಶ್ನೆ ಕೇಳುತ್ತಾ ಸಿದ್ದರಾಮಯ್ಯ ದುಂಬಾಲು ಬೀಳುತ್ತಾರೆ.

ದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮೂಡ್ ನಲ್ಲಿರದಿದ್ದರೆ ಮಾಧ್ಯಮದವರೊಂದಿಗೆ ಸರಿಯಾಗಿ ಮಾತಾಡುವುದಿಲ್ಲ, ಸಿಡುಕುತ್ತಾರೆ. ಇವತ್ತು ದೆಹಲಿಯಾಗಿದ್ದು ಅದೇ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ದೆಹಲಿಗೆ ಆಗಮಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ (Lok Sabha polls) ಸ್ಪರ್ಧಿಸಲಿರುವ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಇಂದು ಸಭೆ ನಡೆಯಲಿದ್ದು ಅದರಲ್ಲಿ ಭಾಗವಹಿಸಲು ರಾಜ್ಯ ನಾಯಕರು ಬಂದಿದ್ದಾರೆ. ಈ ಸಂದರ್ಭದಲ್ಲೇ ಕೋಪದ ಮುಖಭಾವದೊಂದಿಗೆ ಸಿದ್ದರಾಮಯ್ಯ ಎಐಸಿಸಿ ಕಚೇರಿಗೆ ಬಂದಾಗ ಇಂಗ್ಲಿಷ್ ಮತ್ತು ಕನ್ನಡ ಪತ್ರಕರ್ತರು ಅವರನ್ನು ಮುಕ್ಕುರಿದರು. ಕನ್ನಡದ ಮಾಧ್ಯಮಗಳ ವರದಿಗಾರರು ಅವರಿಗೆ ಪ್ರಶ್ನೆ ಕೇಳುವ ಪ್ರಯತ್ನ ಮಾಡಲಿಲ್ಲ, ಆದರೆ ಇಂಗ್ಲಿಷ್ ಚ್ಯಾನೆಲ್ ವರದಿಗಾರ್ತಿಯೊಬ್ಬರು ಪ್ರಶ್ನೆ ಕೇಳುತ್ತಾ ಸಿದ್ದರಾಮಯ್ಯ ದುಂಬಾಲು ಬೀಳುತ್ತಾರೆ.

ಆಗ ತಾಳ್ಮೆ ಕಳೆದುಕೊಳ್ಳುವ ಸಿದ್ದರಾಮಯ್ಯ ಏಯ್ ಸುಮ್ನಿರಮ್ಮ, ಅದೇನ್ ಒಂದೇ ಸಮನೆ ಮಾತಾಡ್ತಾ ಇದ್ದೀಯಾ ಅಂತ ಸಿಡುಕುತ್ತಾರೆ. ಯುವ ಪತ್ರಕರ್ತೆ ಮತ್ತೇ ಇಂಗ್ಲಿಷ್ ನಲ್ಲಿ ಏನೋ ಕೇಳಿದಾಗ ಸಿಎಂ, ಯೂ ಡೋಂಟ್ ನೋ ಕನ್ನಡ ಅನ್ನುತ್ತಾರೆ. ನೋ ಅಂತ ವರದಿಗಾರ್ತಿ ಹೇಳಿದಾಗ ಸಿದ್ದರಾಮಯ್ಯ ಐ ಡೋಂಟ್ ವಾಂಟ್ ಟು ಟಾಕ್ ಅನ್ನುತ್ತಾ ಮುಂದೆ ಸಾಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:   ಯದುವೀರ್ ಪರ ಪ್ರಚಾರ ಮಾಡುತ್ತಿದ್ದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ ಬಗ್ಗೆ ಹೇಳಿದ್ದು ಸರಿಯೆಂದರು!