ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳೊಂದಿಗೆ ಕೂತು ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು!
ಸಿದ್ದರಾಮಯ್ಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳೊಂದಿಗೆ ಊಟ ಮಾಡುವಾಗ ಅವರ ಬಲಭಾಗದಲ್ಲಿ ಇಬ್ಬರು ಬಾಲಕಿಯರು ಕುಳಿತಿದ್ದರು ಮತ್ತು ಎಡಕ್ಕೆ ಸಮಾಜ ಕಲ್ಯಾಣ ಖಾತೆ ಸಚಿವ ಹೆಚ್ ಸಿ ಮಹದೇವಪ್ಪ ಕುಳಿತಿದ್ದರು. ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಸಹ ಮಕ್ಕಳೊಂದಿಗೆ ಕುಳಿತಿದ್ದರು.
ಬೆಂಗಳೂರು: ಮುಖ್ಯಮಂತ್ರಿಯವರ ಈ ಸರಳತೆಯೇ ಜನರಿಗೆ ಇಷ್ಟವಾಗೋದು. ಶಾಲಾ ಮಕ್ಕಳ ಹಾಸ್ಟೆಲ್ ನಲ್ಲಿ ಅವರೊಂದಿಗೆ ಕೂತು ಊಟ ಮಾಡಿದ ಸಿದ್ದರಾಮಯ್ಯರನ್ನು ನೋಡಿ. ಇಂದು ವಿಧಾನ ಸೌಧದಲ್ಲಿ ಸಭೆಯೊಂದನ್ನು ನಡೆಸಿದ ಬಳಿಕ ಸಿದ್ದರಾಮಯ್ಯ ನೇರವಾಗಿ ಚಾಮರಾಜಪೇಟೆಯಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಗೆ ಒಂದು ಅಚ್ಚರಿಯ ಭೇಟಿ ನೀಡಿದರು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಶಾಲೆಯಲ್ಲಿ ಸುಮಾರು 250 ಮಕ್ಕಳಿದ್ದಾರೆ. ಮೊದಲಿಗೆ ಮಕ್ಕಳೊಂದಿಗೆ ಆಟಪಾಟದಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ಸ್ವಲ್ಪ ಹೊತ್ತು ಮೇಷ್ಟ್ರು ಕೂಡ ಆಗಿದ್ದರು. ಕನ್ನಡ ಮತ್ತು ಕನ್ನಡ ವ್ಯಾಕರಣ ಅವರ ನೆಚ್ಚಿನ ವಿಷಯಗಳಾಗಿರಬಹುದು! ಕನ್ನಡ ಭಾಷೆಗೆ ಸಂಬಂಧಿಸಿದ ಹಲವು ಪ್ರಶ್ನೆಗಳನ್ನು ಅವರು ಮಕ್ಕಳನ್ನು ಕೇಳಿದರು. ನಂತರ ಅವರು ಮಕ್ಕಳೊಂದಿಗೆ ಲಂಚ್ ಕೂಡ ಮಾಡಿದರು. ಊಟವಾದ ಮೇಲೆ ಅಡುಗೆ ಮಾಡುವ ಮಹಿಳೆಯರನ್ನು ಕರೆದ ಮುಖ್ಯಮಂತ್ರಿಯವರು, ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕು, ಹಾಗೆಯೇ ಅನ್ನವನ್ನೂ ಇನ್ನಷ್ಟು ಬೇಯಿಸಿದರೆ ಚೆನ್ನಾಗಿರುತ್ತದೆ ಎಂದು ಸಲಹೆ ನೀಡಿದರು. ನಾಡಿನ ಮುಖ್ಯಮಂತ್ರಿ ತಮ್ಮೊಂದಿಗೆ ಕುಳಿತು ಊಟ ಮಾಡಿದ್ದು ಮಕ್ಕಳಿಗೆ ಬಹಳ ಸಂತೋಷ ನೀಡಿರಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವನಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ