‘ಅನ್ನ’ ಸಿನಿಮಾ ವೀಕ್ಷಿಸಿ ಭಾವುಕರಾದ ಸಿಎಂ ಸಿದ್ದರಾಮಯ್ಯ; ಕಾಡಿತು ಬಾಲ್ಯದ ನೆನಪು

Edited By:

Updated on: Sep 22, 2024 | 10:35 PM

ಮೈಸೂರಿನ ಡಿಆರ್​ಸಿ ಚಿತ್ರಮಂದಿರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ‘ಅನ್ನ’ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ‘ಅನ್ನ ಊಟ ಮಾಡಲು ನನ್ನೂರಿನ ಜನ ಹಬ್ಬಕ್ಕೆ ಕಾಯುತ್ತಿದ್ದರು. ಈ ಸಿನಿಮಾ ನೋಡುವಾಗ ನನ್ನ ಬಾಲ್ಯದ ದಿನಗಳು ಕಣ್ಣೆದುರಿಗೆ ಬಂದವು’ ಎಂದು ಹೇಳಿದರು. ಸಿನಿಮಾಗೆ ಪ್ರಶಂಸೆ ಸೂಚಿಸಿದ ಸಿದ್ದರಾಮಯ್ಯ ಅವರು ಚಿತ್ರತಂಡಕ್ಕೆ ಶುಭ ಕೋರಿದರು.

‘ನಾನು ಕಂಡ ಹಸಿವು, ಬಡತನಗಳು ನಾಡಿನ ಯಾರೊಬ್ಬರನ್ನೂ ಬಾಧಿಸದಿರಲಿ ಎಂಬ ಕಾರಣಕ್ಕೆ ಅನ್ನಭಾಗ್ಯ ಯೋಜನೆಯನ್ನು 2013ರಲ್ಲಿ ಜಾರಿ ಮಾಡಿದೆ. ಈ ಸಿನಿಮಾದ ಕೊನೆಯಲ್ಲಿ ಈ ಯೋಜನೆಯ ಮಹತ್ವದ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ. ಮನರಂಜನೆಯ ಜೊತೆಗೆ ಹಸಿವಿನ ಎದುರು ಬೇರೆಲ್ಲಾ ಸಂಬಂಧಗಳು ಹೇಗೆ ನಗಣ್ಯ ಎನಿಸುತ್ತವೆ ಎಂಬ ಸಂದೇಶವನ್ನು ಈ ಸಿನಿಮಾ ಒಳಗೊಂಡಿದೆ. ಈ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಚಿತ್ರತಂಡಕ್ಕೆ ಶುಭವಾಗಲಿ. ಸಿನಿಮಾ ಯಶಸ್ವಿಯಾಗಿ ಮುನ್ನಡೆಯಲಿ’ ಎಂದು ‘ಅನ್ನ’ ಸಿನಿಮಾ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಹಾರೈಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Sep 22, 2024 09:23 PM
Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More