Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಸಿದ್ದರಾಮಯ್ಯರಿಗೆ ಸ್ಪೆಷಲ್​ ಕುರಿ ಗಿಫ್ಟ್​ ಮಾಡಿದ ರಾಯಚೂರು ಅಭಿಮಾನಿ

ಸಿಎಂ ಸಿದ್ದರಾಮಯ್ಯರಿಗೆ ಸ್ಪೆಷಲ್​ ಕುರಿ ಗಿಫ್ಟ್​ ಮಾಡಿದ ರಾಯಚೂರು ಅಭಿಮಾನಿ

TV9 Web
| Updated By: ಆಯೇಷಾ ಬಾನು

Updated on: Aug 04, 2023 | 12:32 PM

ಸಿಎಂ ನಿವಾಸಕ್ಕೆ ಸ್ಪೆಷಲ್​ ಕುರಿ ಜೊತೆಗೆ ಕರಿ ಕಂಬಳಿಯೊಂದಿಗೆ ಆಗಮಿಸಿದ ಅಭಿಮಾನಿ, ಸಿದ್ದು ಬರ್ತಡೇ ದಿನ ನೀಡೋಕೆ ಆಗಿಲ್ಲ. ಅದಕ್ಕಾಗಿಯೇ ಈಗ ತಂದಿದ್ದೇನೆ. ಪ್ರತಿ ವರ್ಷ ನಾನು ಕುರಿ ಗಿಫ್ಟ್ ನೀಡ್ತೆನೆ ಎಂದು ಅಭಿಮಾನ ವ್ಯಕ್ತಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಹುಟ್ಟಹಬ್ಬ ಹಿನ್ನೆಲೆಯಲ್ಲಿ ರಾಯಚೂರಿನ ಅಭಿಮಾನಿಯೊಬ್ಬರು ಬೆಂಗಳೂರಿನ ಸಿಎಂ ನಿವಾಸಕ್ಕೆ ಆಗಮನಿಸಿ ಸ್ಪೆಷಲ್​ ಕುರಿ ಗಿಫ್ಟ್​ ಮಾಡಿದ್ದಾರೆ. ಸಿಎಂ ನಿವಾಸಕ್ಕೆ ಸ್ಪೆಷಲ್​ ಕುರಿ ಜೊತೆಗೆ ಕರಿ ಕಂಬಳಿಯೊಂದಿಗೆ ಆಗಮಿಸಿದ ಅಭಿಮಾನಿ, ಸಿದ್ದು ಬರ್ತಡೇ ದಿನ ನೀಡೋಕೆ ಆಗಿಲ್ಲ. ಅದಕ್ಕಾಗಿಯೇ ಈಗ ತಂದಿದ್ದೇನೆ. ಪ್ರತಿ ವರ್ಷ ನಾನು ಕುರಿ ಗಿಫ್ಟ್ ನೀಡ್ತೆನೆ ಎಂದು ಅಭಿಮಾನ ವ್ಯಕ್ತಪಡಿಸಿದ್ದಾರೆ.

1947ರ ಆಗಸ್ಟ್ 03ರಂದು ಮೈಸೂರಿನ ವರುಣಾ ಹೋಬಳಿಯ ಸಿದ್ಧರಾಮನಹುಂಡಿಯಲ್ಲಿ ಜನಿಸಿದ ಸಿದ್ದರಾಮಯ್ಯನವರು ನಿನ್ನೆ ತಮ್ಮ 76ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಹಿನ್ನೆಲೆ ರಾಯಚೂರಿನ ಅಭಿಮಾನಿಯೊಬ್ಬರು ಬೆಂಗಳೂರಿನ ಸಿಎಂ ನಿವಾಸಕ್ಕೆ ಆಗಮಿಸಿ ಟಗರು ಗಿಫ್ಟ್ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಇವರ ತಂದೆ ಸಿದ್ಧರಾಮೇಗೌಡ, ತಾಯಿ-ಬೋರಮ್ಮ. ಇವರು ಚಿಕ್ಕಂದಿನಲ್ಲೇ ಜಾನಪದ ನೃತ್ಯ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯಗಳನ್ನು ಕಲಿತಿದ್ದಾರೆ.