ಕೊನೆಗೂ ಇಳಿಕೆ ಕಂಡ ಟೆಮೆಟೊ, ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಂಪು ಸುಂದರಿ ದರ ಎಷ್ಟಿದೆ ಗೊತ್ತಾ?
ಎರಡು ದಿನಗಳ ಹಿಂದೆ 2500 ರಿಂದ 2700 ಮಾರಾಟವಾಗಿದ್ದ ಟೊಮೆಟೊ ಇಳಿಕೆ ಕಾಣುತ್ತಿದೆ. ರಾಜ್ಯದ ಚಿತ್ರದುರ್ಗ, ಮಂಡ್ಯ, ಚಾಮರಾಜನಗರ ಸೇರಿದಂತೆ ಆಂಧ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಪೂರೈಕೆಯಾಗುತ್ತಿದೆ. ಈ ಹಿನ್ನಲೆ ಟೊಮೆಟೊ ಇಳಿಮುಖ ಕಾಣುತ್ತಿದೆ.
ಕೋಲಾರ, ಆ.04: ಕಳೆದೆರಡು ತಿಂಗಳಿಂದ ನಾನೇ ರಾಣಿ ಅಂತಿದ್ದ ಟೊಮೆಟೊ ಬೆಲೆ ಈಗ ಕುಸಿಯುತ್ತಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಂಪು ಸುಂದರಿಯ ಹವಾ ಕಡಿಮೆಯಾಗಿದೆ. ಕಳೆದ ಕೆಲ ತಿಂಗಳಿಂದ ಟೊಮೆಟೊ ದಾಖಲೆ ಮಟ್ಟದಲ್ಲಿ ಸೇಲ್ ಆಗುತ್ತಿತ್ತು. ಆದ್ರೆ ಇಂದು ಕೊಂಚ ಕುಸಿದಿದೆ. ಹದಿನೈದು ಕೆಜಿ ಬಾಕ್ಸ್ ಟೊಮೆಟೊ 2,400 ರಿಂದ 2,700 ರೂಪಾಯಿಗೆ ಹರಾಜಾಗುತ್ತಿತ್ತು. ಆದ್ರೆ ಕಳೆದೆರಡು ದಿನಗಳಿಂದ 15 ಕೆಜಿ ಬಾಕ್ಸ್ 1500 ರೂ.ಗಳಿಗೆ ಮಾರಾಟವಾಗಿದೆ.
ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಟೊಮೆಟೊ ಬಾಕ್ಸ್ 1500 ರೂ.ಗಳಿಗೆ ಮಾರಾಟವಾಗಿದೆ. ಒಂದು ಬಾಕ್ಸ್ ಮೇಲೆ 800 ರೂ ಇಳಿಕೆಯಾಗಿದೆ. ಎರಡು ದಿನಗಳ ಹಿಂದೆ 2500 ರಿಂದ 2700 ಮಾರಾಟವಾಗಿದ್ದ ಟೊಮೆಟೊ ಇಳಿಕೆ ಕಾಣುತ್ತಿದೆ. ರಾಜ್ಯದ ಚಿತ್ರದುರ್ಗ, ಮಂಡ್ಯ, ಚಾಮರಾಜನಗರ ಸೇರಿದಂತೆ ಆಂಧ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಪೂರೈಕೆಯಾಗುತ್ತಿದೆ. ಈ ಹಿನ್ನಲೆ ಟೊಮೆಟೊ ಇಳಿಮುಖ ಕಾಣುತ್ತಿದೆ. ಸದ್ಯ ಟೊಮೆಟೊ ದರ ಇಳಿಕೆಯಾಗುತ್ತಿದ್ದಂತೆ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿದೆ.
Latest Videos