ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಲು ಕಲಬುರಗಿಗೆ ಪ್ರಯಾಣ ಬೆಳೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ದೊಡ್ಡ ಬೆಂಗಾವಲು ಪಡೆ!

|

Updated on: Aug 05, 2023 | 11:39 AM

ಮುಖ್ಯಮಂತ್ರಿಯ ಕಾನ್ವಾಯ್ ರಸ್ತೆ ಮೇಲೆ ಹೊರಟರೆ ಇತರ ವಾಹನಗಳು ಸ್ತಬ್ಧಗೊಳ್ಳುತ್ತವೆ. ದಾಖಲೆಯ 14 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಖರ್ಚಾಗುವ ಇಂಧನದ ಬಗ್ಗೆ ಯೋಚಿಸುವುದಿಲ್ಲವೇ?

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹ ಜ್ಯೋತಿ ಯೋಜನೆಗೆ (Gruha Jyoti scheme) ಇಂದು ಕಲಬುರಗಿಯಲ್ಲಿ ಚಾಲನೆ ಸಿಗಲಿದೆ ಮತ್ತು ಅದೇ ಕಾರ್ಯಕ್ಕಾಗಿ ಮುಖ್ಯಮಂತ್ರಿ ಬೆಳಗ್ಗೆ ಪ್ರಯಾಣ ಬೆಳೆಸಿದರು. ನಾವು ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಜೊತೆ ಹೋಗುವ ದೊಡ್ಡ ಬೆಂಗಾವಲು ಪಡೆ (ಕಾನ್ವಾಯ್) (convoy) ಬಗ್ಗೆ ವರದಿ ಮಾಡಿದ್ದೇವೆ. ಮುಖ್ಯಮಂತ್ರಿ ತಮ್ಮ ನಿವಾಸದಿಂದ ಹೊರಬಿದ್ದ ತಕ್ಷಣ 15-20 ವಾಹನಗಳು ಅವರನ್ನು ಹಿಂಬಾಲಿಸುವ ಅವಶ್ಯಕತೆಯಿದೆಯೇ? ವಿಡಿಯೋ ನೋಡಿ. ಸಿದ್ದರಾಮಯ್ಯ ಕಲಬುರಗಿ ಪ್ರಯಾಣ ನಿಮಿತ್ತ ಹೆಚ್ ಎಎಲ್ ಏರ್ಪೋರ್ಟ್ ಗೆ ಹೊರಟಾಗ ಒಂದರ ಹಿಂದೆ ಒಂದರಂತೆ ಸಾಲು ಸಾಲು ವಾಹನಗಳು ಅವರ ಕಾರಿನ ಹಿಂದೆ ಹೋಗುತ್ತವೆ. ಅಧಿಕಾರಿಗಳಿಗೊಂದು, ಭದ್ರತಾ ಸಿಬ್ಬಂದಿಗೊಂದು-ಎರಡು ಕಾರು ಸಾಕಾಗಲ್ವಾ? ಮುಖ್ಯಮಂತ್ರಿಯ ಕಾನ್ವಾಯ್ ರಸ್ತೆ ಮೇಲೆ ಹೊರಟರೆ ಇತರ ವಾಹನಗಳು ಸ್ತಬ್ಧಗೊಳ್ಳುತ್ತವೆ. ದಾಖಲೆಯ 14 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಖರ್ಚಾಗುವ ಇಂಧನದ ಬಗ್ಗೆ ಯೋಚಿಸುವುದಿಲ್ಲವೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ