ಅಧಿವೇಶನದಲ್ಲಿ ಪ್ರತಿಪಕ್ಷಗಳು ನಡೆಸುವ ದಾಳಿಗೆ ಸನ್ನದ್ಧರಾಗಿರುವಂತೆ ತಿಳಿಸಲು ಸಿಎಂ ಸಭೆ ಕರೆದಿದ್ದರು: ಪರಮೇಶ್ವರ್

ಅಧಿವೇಶನದಲ್ಲಿ ಪ್ರತಿಪಕ್ಷಗಳು ನಡೆಸುವ ದಾಳಿಗೆ ಸನ್ನದ್ಧರಾಗಿರುವಂತೆ ತಿಳಿಸಲು ಸಿಎಂ ಸಭೆ ಕರೆದಿದ್ದರು: ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 19, 2024 | 11:19 AM

ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಮಗಾರಿಗಳಲ್ಲಿ ಶೇಕಡ 40 ಕಮೀಶನ್ ವಸೂಲು ಮಾಡಲಾಗುತಿತ್ತು ಎಂದು ಕಾಂಗ್ರೆಸ್ ನಾಯಕರು ಮಾಡಿದ ಆರೋಪಗಳನ್ನು ಲೋಕಾಯುಕ್ತ ಸುಳ್ಳೆಂದು ಹೇಳಿದ್ದು ಇದನ್ನು ಹೇಗೆ ಎದುರಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಪರಮೇಶ್ವರ್ ಕೇವಲ ಒಂದು ಆರೋಪದಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ, ಇನ್ನೂ ಹಲವಾರು ಆರೋಪಗಳಿಗೆ ಎಂದರು.

ಬೆಂಗಳೂರು: ನಿನ್ನೆ ಸಾಯಂಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಚಿವರ ಸಭೆಯ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಮಾಹಿತಿ ನೀಡಿದರು. ಡಿಸೆಂಬರ್ 9ರಿಂದ ವಿಧಾನಸಭಾ ಅಧಿವೇಶನ ಶುರುವಾಗಲಿದೆ, ವಿರೋಧ ಪಕ್ಷದ ನಾಯಕರು ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ದಾಳಿ ನಡೆಸುವುದು ಖಚಿತ, ಹಾಗಾಗಿ ಅವರು ಕೇಳುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಎಲ್ಲ ಇಲಾಖೆಗಳ ಸಚಿವರು ತಯಾರಾಗಿರಬೇಕು ಎಂದು ತಿಳಿಸಲು ಮುಖ್ಯಮಂತ್ರಿ ಸಭೆ ಕರೆದಿದ್ದರು ಎಂದು ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ನಕ್ಸಲ್ ಎನ್​ಕೌಂಟರ್: ಕಾರ್ಯಾಚರಣೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದಿಷ್ಟು

Published on: Nov 19, 2024 11:18 AM