ಶಾಲಾ ಮಕ್ಕಳಿಗೆ ರಾಗಿಮಾಲ್ಟ್ ಬೆರೆಸಿದ ಹಾಲು ನೀಡುವ ಯೋಜನೆಗೆ ಸಿಎಂ ಸಿದ್ದರಾಮಯ್ಯರಿಂದ ಹಸಿರು ನಿಶಾನೆ

|

Updated on: Feb 22, 2024 | 1:58 PM

ಒಂದು ಹೆಣ್ಣುಮಗುಗೆ ತಮ್ಮ ಕೈಯಾರೆ ಹಾಲು ಕುಡಿಸಿ ತಲೆ ನೇವರಿಸುತ್ತಾ ಆಶೀರ್ವದಿಸಿದರು. ನಂತರ ಸಿದ್ದರಾಮಯ್ಯ ಖುದ್ದು ಅರ್ಧಲೋಟ ಮಾಲ್ಟ್ ಯುಕ್ತ ಹಾಲು ಕುಡಿದರು. ಸಿದ್ದರಾಮಯ್ಯ ಮುಖದ ಮೇಲೂ ಸಂಭ್ರಮದ ಕಳೆ. ಕಾರ್ಯಕ್ರಮದ ನಿರೂಪಕಿ ಹೇಳುವಂತೆ 2013 ರಲ್ಲಿ ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದರು

ಬೆಂಗಳೂರು: ನಿನ್ನೆ ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಘೋಷಣೆ ಮಾಡಿದಂತೆ, ಇಂದು ಬೆ ಬೆಂಗಳೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ರಾಜ್ಯದ ಎಲ್ಲ ಸರ್ಕಾರೀ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದಲ್ಲಿ ಮೂರು ದಿನ ಬಹುಪೋಷಕಾಂಶಯುಕ್ತ ರಾಗಿಮಾಲ್ಟ್ ಬೆರೆಸಿದ ಹಾಲನ್ನು (Ragi malt blended milk) ನೀಡುವ ಯೋಜನೆಗೆ ಚಾಲನೆ ನೀಡಿದರು. ವೇದಿಕೆಯ ಮೇಲೆ ಮುಖ್ಯಮಂತ್ರಿಯವರ ಜೊತೆ ಮಧು ಬಂಗಾರಪ್ಪ ಸಂತಸದಿಂದ ಬೀಗುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಸುಮಾರು 59 ಲಕ್ಷ ಮಕ್ಕಳಿಗೆ ರಾಗಿಮಾಲ್ಟ್ ಯುಕ್ತ ಹಾಲು ಒದಗಿಸುವ ಯೋಜನೆ ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿಯವರು ಸರ್ಕಾರೀ ಶಾಲೆಯೊಂದರ ಕೆಲ ಮಕ್ಕಳನ್ನು ವೇದಿಕೆಗೆ ಕರೆದು ರಾಗಿಮಾಲ್ಟ್ ಬೆರೆಸಿದ ಹಾಲು ವಿತರಿಸಿದರು. ಒಂದು ಹೆಣ್ಣುಮಗುಗೆ ತಮ್ಮ ಕೈಯಾರೆ ಹಾಲು ಕುಡಿಸಿ ತಲೆ ನೇವರಿಸುತ್ತಾ ಆಶೀರ್ವದಿಸಿದರು. ನಂತರ ಸಿದ್ದರಾಮಯ್ಯ ಖುದ್ದು ಅರ್ಧಲೋಟ ಮಾಲ್ಟ್ ಯುಕ್ತ ಹಾಲು ಕುಡಿದರು. ಸಿದ್ದರಾಮಯ್ಯ ಮುಖದ ಮೇಲೂ ಸಂಭ್ರಮದ ಕಳೆ. ಕಾರ್ಯಕ್ರಮದ ನಿರೂಪಕಿ ಹೇಳುವಂತೆ 2013 ರಲ್ಲಿ ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದರು ಮತ್ತು ಯೋಜನೆಗೆ ಈಗ ದಶಮಾನೋತ್ಸವದ ಸಂಭ್ರಮ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ