ಒಂದು ವರ್ಷ ಪೂರೈಸಿದ ಸರ್ಕಾರ, ಗ್ಯಾರಂಟಿ ಯೋಜನೆಗಳ ವೆಚ್ಚದ ಬಗ್ಗೆ ವಿವರ ನೀಡಿದ ಸಿಎಂ ಸಿದ್ದರಾಮಯ್ಯ

|

Updated on: May 20, 2024 | 2:11 PM

ಹಾಗೆಯೇ, ಗೃಹಲಕ್ಷ್ಮಿ ಯೋಜನೆಯಲ್ಲಿ 1.20 ಕೋಟಿ ಮಹಿಳೆಯರು ಪ್ರರಿ ತಿಂಗಳು ₹ 2,000 ಪಡೆಯುತ್ತಿದ್ದಾರೆ ಮತ್ತು ಇದುವರೆಗೆ ₹ 20, 293.49 ಕೋಟಿ ವಿತರಿಸಲಾಗಿದೆ. ತಡವಾಗಿ ಆರಂಭಗೊಂಡಿರುವ ಯುವ ನಿಧಿ ಯೋಜನೆಗೆ ಇದುವರೆಗೆ 1,53,255 ನಿರುದ್ಯೋಗಿ ಯುವಕರು ಹೆಸರು ನೋಂದಾಯಿಸಿಕೊಂಡಿದ್ದು ಈವರೆಗೆ ₹ 29. 25 ಲಕ್ಷ ಖರ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದಾರಾಮಯ್ಯ ಹೇಳಿದರು.

ಬೆಂಗಳೂರು: ಅಧಿಕಾರಕ್ಕೆ ಬಂದು ತಮ್ಮ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡಿದರು. ಚುನಾವಣಾ ಸಮಯದಲ್ಲಿ ಜನತೆಗೆ ನೀಡಿದ ಗ್ಯಾರಂಟಿ ಯೋಜನೆ (guarantee schemes) ಯಶಸ್ವೀಯಾಗಿ ಜಾರಿ ಮಾಡಿದ್ದೇವೆ ಎಂದ ಸಿದ್ದರಾಮಯ್ಯ ಪ್ರತಿ ಯೋಜನೆಯ ಫಲಾನುಭವಿಗಳು (beneficiaries) ಮತ್ತು ಸರ್ಕಾರದಿಂದ ಆಗಿರುವ ವೆಚ್ಚದ ಬಗ್ಗೆ ವಿವರಗಳನ್ನು ನೀಡಿದರು. ಸರ್ಕಾರದ ಶಕ್ತಿ ಯೋಜನೆ ಅಡಿಯಲ್ಲಿ ಏಪ್ರಿಲ್ 2024 ಅಂತ್ಯದವರೆಗೆ 201.32 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ ಮತ್ತು ಯೋಜನೆಗಾಗಿ ಸರ್ಕಾರ ₹ 4,857. 95 ಕೋಟಿನ ವ್ಯಯಿಸಿದೆ. ಅನ್ನಭಾಗ್ಯ ಯೋಜನೆಯಲ್ಲಿ 4.10 ಕೋಟಿ ಫಲಾನುಭವಿಗಳಿದ್ದು ಒಂದು ವರ್ಷದಲ್ಲಿ ಯೋಜನೆಗೆ ₹ 5,754. 06 ಕೋಟಿ ಖರ್ಚು ಮಾಡಲಾಗಿದೆ. ಗೃಹ ಜ್ಯೋತಿ ಯೋಜನೆ ಅಡಿ 1.60 ಕೋಟಿ ಜನ ಉಚಿತ 200 ಯೂನಿಟ್ ವಿದ್ಯುತ್ ಪಡೆಯುತ್ತಿದ್ದಾರೆ ಮತ್ತು ಈ ಬಾಬತ್ತಿನಲ್ಲಿ ಆಗಿರುವ ವೆಚ್ಚ ₹ 7,436 ಕೋಟಿ ಎಂದು ಸಿದ್ದರಾಮಯ್ಯ ಹೇಳಿದರು. ಹಾಗೆಯೇ, ಗೃಹಲಕ್ಷ್ಮಿ ಯೋಜನೆಯಲ್ಲಿ 1.20 ಕೋಟಿ ಮಹಿಳೆಯರು ಪ್ರರಿ ತಿಂಗಳು ₹ 2,000 ಪಡೆಯುತ್ತಿದ್ದಾರೆ ಮತ್ತು ಇದುವರೆಗೆ ₹ 20, 293.49 ಕೋಟಿ ವಿತರಿಸಲಾಗಿದೆ. ತಡವಾಗಿ ಆರಂಭಗೊಂಡಿರುವ ಯುವ ನಿಧಿ ಯೋಜನೆಗೆ ಇದುವರೆಗೆ 1,53,255 ನಿರುದ್ಯೋಗಿ ಯುವಕರು ಹೆಸರು ನೋಂದಾಯಿಸಿಕೊಂಡಿದ್ದು ಈವರೆಗೆ ₹ 29. 25 ಲಕ್ಷ ಖರ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದಾರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಇದು ನಮ್ಮ ಆರ್​ಸಿಬಿ ತಂಡದ ಹೊಸ ಅಧ್ಯಾಯ -ಟ್ವೀಟ್ ಮಾಡಿ ಶುಭ ಕೋರಿದ ಸಿಎಂ ಸಿದ್ದರಾಮಯ್ಯ