Siddaramaiah Vs Kumaraswamy: ಮೈತ್ರಿಕೂಟ ವ್ಯರ್ಥ ಕಸರತ್ತು ಅಂತ ಟೀಕಿಸಿದ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಮಾರ್ಮಿಕ ಪ್ರತಿಕ್ರಿಯೆ ನೀಡಿದರು!

|

Updated on: Jul 17, 2023 | 5:28 PM

ಆಗ 21 ಪಕ್ಷಗಳ ನಾಯಕರನ್ನು ಬೆಂಗಳೂರಿಗೆ ಕರೆದಿದ್ದು ಯಾರು ಅಂತ ಸಿದ್ದರಾಮಯ್ಯ ನಗುತ್ತಾ ಪ್ರಶ್ನಿಸಿದಾಗ ಮಾಧ್ಯಮದವರು ಕುಮಾರಸ್ವಾಮಿಯವರೇ ಅಂತ ಹೇಳಿದರು.

ಬೆಂಗಳೂರು: ನಗರದ ಖಾಸಗಿ ಹೋಟೆಲೊಂದರಲ್ಲಿ ಇವತ್ತು ಮತ್ತು ನಾಳೆ ನಡೆಯುವ 24 ವಿರೋಧ ಪಕ್ಷಗಳ ಮಹಾ ಮೈತ್ರಿ ಸಭೆಯನ್ನು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಒಂದೇ ಸಮನೆ ಟೀಕಿಸುತ್ತಿದ್ದಾರೆ. ಇಂದು ಬೆಳಗ್ಗೆ ಸುದ್ದಿಗೋಷ್ಟಿಯೊಂದನ್ನು ನಡೆಸಿ ಅವರು ಮಾತಾಡಿದಾಗ, ಮಹಾಮೈತ್ರಿ, ವಿರೋಧ ಪಕ್ಷಗಳ ಒಕ್ಕೂಟ (grand Alliance) ಎಲ್ಲ ಒಂದು ವ್ಯರ್ಥ ಕಸರತ್ತು, ಈ ಹಿಂದೆಯೂ 21 ಪಾರ್ಟಿಗಳ ನಾಯಕರು ಬೆಂಗಳೂರಲ್ಲಿ ಒಟ್ಟಿಗೆ ಸೇರಿ ಕೈಯೆತ್ತಿದರೇ ಹೊರತು ಕೈ ಹಿಡಿಯಲಿಲ್ಲ ಅಂತ ಹೇಳಿದ್ದರು. ಅವರು ಹೇಳಿದ್ದನ್ನು ಮಾಧ್ಯಮ ಪ್ರತಿನಿಧಿಗಳು ಸಿದ್ದರಾಮಯ್ಯನವರಿಗೆ (Siddaramaiah) ತಿಳಿಸಿದಾಗ ಮುಖ್ಯಮಂತ್ರಿ ಲೇವಡಿ ಮಾಡಿದರು. ಆಗ 21 ಪಕ್ಷಗಳ ನಾಯಕರನ್ನು ಬೆಂಗಳೂರಿಗೆ ಕರೆದಿದ್ದು ಯಾರು ಅಂತ ನಗುತ್ತಾ ಪ್ರಶ್ನಿಸಿದಾಗ ಮಾಧ್ಯಮದವರು ಕುಮಾರಸ್ವಾಮಿಯವರೇ ಅಂತ ಹೇಳಿದರು. ಹಾಗಾದರೆ ಮೈತ್ರಿಯನ್ನು ಅವರು ಯಾಕೆ ಮುಂದುವರಿಸಿಕೊಂಡು ಹೋಗಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ