My India My Life Goals; ಮಿಷನ್ ಲೈಫ್ ನೊಂದಿಗೆ ಹೆಜ್ಜೆ ಹಾಕುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ: ಜಿ ಕಿಶನ್ ರೆಡ್ಡಿ. ಕೇಂದ್ರ ಸಚಿವ
ನಮ್ಮ ದಿನನಿತ್ಯದ ಚಟುವಟಿಕೆಗಳ ಹೊರತಾಗಿಯೂ ಪರಿಸರದ ಕಡೆ ಗಮನ ಹರಿಸಿ ಅದನ್ನು ಸಂರಕ್ಷಿಸುವೆಡೆ ಧ್ಯಾನ ಹರಿಸೋಣ ಎಂದು ಸಚಿವ ಕಿಶನ್ ರೆಡ್ಡಿ ಮನವಿ ಮಾಡಿಕೊಳ್ಳುತ್ತಾರೆ.
ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿಯವರು (G Kishan Reddy) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ನೀಡಿರುವ ಮಿಷನ್ ಲೈಫ್ (Mission Life) ಅಭಿಯಾನದ ಬಗ್ಗೆ ಒಂದು ಉತ್ತಮ ವಿವರಣೆ ನೀಡಿದ್ದಾರೆ. ಪರಿಸರದೊಡನೆ ಸಹಬಾಳ್ವೆ ನಡೆಸಬೇಕು ಮತ್ತು ಅದನ್ನು ಯಾವತ್ತೂ ಕಡೆಗಣಿಸಬಾರದು, ಅದನ್ನು ಸಂರಕ್ಷಿಸುವುದು ನಮ್ಲೆಲ್ಲರ ಜವಾಬ್ದಾರಿಯಾಗಿರಬೇಕು ಎಂದು ಸಚಿವ ರೆಡ್ಡಿ ಹೇಳುತ್ತಾರೆ. ಪರಿಸರದ ಕಾಳಜಿ ಕೇವಲ ಸರ್ಕಾರದ ಹೊಣೆಗಾರಿಕೆಯಲ್ಲ, ಪ್ರತಿಯೊಬ್ಬ ವ್ಯಕ್ತಿ ಸರ್ಕಾರ ಮತ್ತು ಸಮಾಜದ ಜೊತೆ ಕೈಜೋಡಿಸಬೇಕು. ಇದೇ ಮಾತನ್ನು ಪ್ರಧಾನಿ ಮೋದಿ ಪ್ರತಿಯೊಬ್ಬ ವ್ಯಕ್ತಿಗೆ ಹೇಳುತ್ತಿದ್ದಾರೆ. ಮಿಷನ್ ಲೈಫ್ ಜೊತೆ ಹೆಜ್ಜೆ ಹಾಕುವುದು ಎಲ್ಲ ಭಾರತೀಯರ ಕರ್ತವ್ಯವಾಗಿದ್ದು ಪ್ರಕೃತಿಯನ್ನು ಆರಾಧಿಸುವ ಪ್ರವೃತ್ತಿ ನಮ್ಮಲ್ಲಿ ಬೆಳೆಯಬೇಕು ಎದು ಸಚಿವರು ಹೇಳುತ್ತಾರೆ. ನಮ್ಮ ದಿನನಿತ್ಯದ ಚಟುವಟಿಕೆಗಳ ಹೊರತಾಗಿಯೂ ಪರಿಸರದ ಕಡೆ ಗಮನ ಹರಿಸಿ ಅದನ್ನು ಸಂರಕ್ಷಿಸುವೆಡೆ ಧ್ಯಾನ ಹರಿಸೋಣ ಎಂದು ಸಚಿವ ಕಿಶನ್ ರೆಡ್ಡಿ ಮನವಿ ಮಾಡಿಕೊಳ್ಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ