Assembly Session: ದಶಕಗಳ ಹಿಂದೆ ಸಂವಿಧಾನ ಸಭೆಯಲ್ಲಿ ಡಾ ಬಿಅರ್ ಅಂಬೇಡ್ಕರ್ ಮಾಡಿದ ಭಾಷಣವನ್ನು ಸಿದ್ದರಾಮಯ್ಯ ಸದನದಲ್ಲಿ ಉಲ್ಲೇಖಿಸಿದರು
ಸಾಮಾಜಿಕ ಅಸಮಾನತೆಗೆ ಸಿಕ್ಕು ನರಳುವ ಜನರೇ ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು
ಬೆಂಗಳೂರು: ವಿಧಾನ ಪರಿಷತ್ನಲ್ಲಿಂದು ಭಾಷಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) 1949, ನವೆಂಬರ್ 25 ರಂದು ಕನ್ಸ್ಟಿಟುಯೆಂಟ್ ಅಸೆಂಬ್ಲಿಯಲ್ಲಿ (ಸಂವಿಧಾನ ಸಭೆ) ಸಂವಿಧಾನ ಶಿಲ್ಪಿ ಡಾ ಬಿಅರ್ ಅಂಬೇಡ್ಕರ್ (Dr BR Ambedkar) ಮಾಡಿದ ಅವರ ಕೊನೆಯ ಭಾಷಣವನ್ನು ಉಲ್ಲೇಖಿಸಿದರು. ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರೂ ಸಮಭಾಗಿಯಾಗಿ, ಬಂದ ಫಲ ಸಮಾನವಾಗಿ ಹಂಚಿಕೊಳ್ಳುವುದನ್ನು ಬಾಬಾ ಸಾಹೇಬರು ಸಮಾನತೆ (equality) ಅಂತ ವ್ಯಾಖ್ಯಾನಿಸಿದ್ದರು ಎಂದು ಸಿದ್ದರಾಮಯ್ಯ ಹೇಳಿದರು. ನಮ್ಮ ದೇಶದಲ್ಲಿ ರಾಜಕೀಯ ಸಮಾನತೆ ಸಿಕ್ಕಿದೆ. ಅಂದರೆ, ದೇಶದ ರಾಷ್ಟ್ರಪತಿ ಮತ್ತು ತೀರ ಕೆಳಸ್ತರದ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಒಂದೇ ವೋಟು ಮತ್ತು ಅದರ ಮೌಲ್ಯ ಕೂಡ ಒಂದೇ. ರಾಷ್ಟ್ರಪತಿಗಳು ಚಲಾಯಿಸಿದ ವೋಟಿಗೆ ಹೆಚ್ಚಿನ ಮೌಲ್ಯ ಇರೋದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಆದರೆ ದೇಶದ ಜನರಿಗೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಿಕ್ಕಿಲ್ಲ. ವೋಟಿನ ಸಿದ್ಧಾಂತ ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳಿಗೆ ಅನ್ವಯಿಸುವುದಿಲ್ಲ. ಸಾಮಾಜಿಕ ಅಸಮಾನತೆಗೆ ಸಿಕ್ಕು ನರಳುವ ಜನರೇ ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು. ಬಸವಣ್ಣನವರು ಹೇಳಿದ ಕಾಯಕ ದಾಸೋಹ ಉಕ್ತಿಯನ್ನೂ ಮುಖ್ಯಮಂತ್ರಿ ಉಲ್ಲೇಖಿಸಿದರು,
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ