BJP Protest: ಪಂಚೆ ಎತ್ತಿ ಸ್ಪೀಕರ್ ಕೋಣೆ ಬಾಗಿಲಿಗೆ ಒದ್ದಿದ್ದು, ಸ್ಪೀಕರ್ ಮೇಲೆ ಫೈಲ್ ಎಸೆದಿದ್ದು ಗೂಂಡಾಗಿರಿ: ಆರ್ ಅಶೋಕ
ಸುಪ್ರೀಮ್ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು; ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳನ್ನು ಜನತೆಗೆ ನೀಡಿದ ಲಂಚ ಅಂತ ಹೇಳಿದ್ದಾರೆ. ಇನ್ನಾದರೂ ನಾಚಿಕೆಯಾಗಬೇಕು ಈ ಸರ್ಕಾರಕ್ಕೆ ಎಂದು ಅಶೋಕ ಹೇಳಿದರು.
ಬೆಂಗಳೂರು: ಸದನದಲ್ಲಿ ಸಭಾಧ್ಯಕ್ಷರ ಪೀಠವನ್ನು ಅವಮಾನಿಸಿದ ಹಿನ್ನೆಲೆ 10 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ್ದನ್ನು ವಿರೋಧಿಸಿ ಬಿಜೆಪಿ ಶಾಸಕರು ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ವಿಧಾನ ಸೌಧ ಆವರಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತಾಡಿದ ಆರ್ ಅಶೋಕ (R Ashoka), ವಿಧೇಯಕದ ಪ್ರತಿಗಳನ್ನು ಹರಿದು ಬಿಸಾಡುವುದು ಗೂಂಡಾಗಿರಿಯಲ್ಲ, ಹಿಂದೆ ಸದನದಲ್ಲಿ ಮುಚ್ಚಿದ್ದ ಸ್ಪೀಕರ್ ಕೋಣೆಯ ಬಾಗಿಲನ್ನು ಸಿದ್ದರಾಮಯ್ಯ (Siddaramaiah) ಪಂಚೆ ಎತ್ತಿ ಒದ್ದರಲ್ಲ ಅದು ಗೂಂಡಾಗಿರಿ, ಡಿಕೆ ಶಿವಕುಮಾರ್ ಫೈಲ್ ಗಳನ್ನು ಎತ್ತಿ ಸ್ಪೀಕರ್ ಮೇಲೆ ಎಸೆದಿದ್ದು ಗೂಂಡಾಗಿರಿ, ಸ್ಪೀಕರ್ ಮೇಲೆ ಹಲ್ಲೆ ಮಾಡಲು ಹೋಗಿದ್ದು ಗೂಂಡಾಗಿರಿ ಎಂದು ಅಶೋಕ ಹೇಳಿದರು. ಸುಪ್ರೀಮ್ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು; ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳನ್ನು ಜನತೆಗೆ ನೀಡಿದ ಲಂಚ ಅಂತ ಹೇಳಿದ್ದಾರೆ. ಇನ್ನಾದರೂ ನಾಚಿಕೆಯಾಗಬೇಕು ಈ ಸರ್ಕಾರಕ್ಕೆ ಎಂದು ಅಶೋಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ