ವೇದಿಕೆಯ ಮೇಲೆ ಪ್ರಧಾನಿ ಮೋದಿ ತನ್ನನ್ನು ಇಕ್ಕಟ್ಟಿಗೆ ಸಿಲುಕಿಸಿದಾಗ ಸಿಎಂ ಸಿದ್ದರಾಮಯ್ಯ ತಲೆ ಕೆರೆದುಕೊಂಡರು!
ಕರ್ನಾಟಕದಲ್ಲಿ, ಅದೂ ರಾಜ್ಯದ ಮುಖ್ಯಮಂತ್ರಿಯ ಸಮ್ಮುಖದಲ್ಲೇ ಜನ ತನಗೆ ಜೈಕಾರ ಹಾಕಿದ್ದನ್ನು ಪ್ರಧಾನಿ ಮೋದಿ ಸಿದ್ದರಾಮಯ್ಯನವರಿಗೆ ಸೂಚ್ಯವಾಗಿ ಹೇಳಿದರು. ಪ್ರಧಾನಿ ಮಾತಿನ ಮರ್ಮ ಮುಖ್ಯಮಂತ್ರಿಯವರಿಗೆ ಗೊತ್ತಾಗಿರಬೇಕು; ಹಾಗಾಗೇ, ತಲೆ ಕೆರೆದುಕೊಳ್ಳುವ ನೆಪದಲ್ಲಿ ಮುಖ ಮುಚ್ಚಿಕೊಳ್ಳುತ್ತಾರೆ!
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಭಟ್ಟರ ಮಾರೇನಹಳ್ಳಿಯಲ್ಲಿ ಜಾಗತಿಕ ಏರೋಸ್ಪೇಸ್ ಬೋಯಿಂಗ್ ನೂತನ ಕ್ಯಾಂಪಸ್ ಉದ್ಘಾಟಿಸಿ ಮಾತಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ತಮ್ಮೊಂದಿಗೆ ವೇದಿಕೆಯ ಮೇಲಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (CM Siddaramaiah) ಇಕ್ಕಟ್ಟಿಗೆ ಸಿಲುಕಿಸಿದರು. ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ; ಭಾರತದಲ್ಲಿ ಅಗಾಧವಾದ ಪ್ರತಿಭೆ (talent pool) ಇದೆ, ಭಾರತದಲ್ಲಿ ಸ್ಥಿರ ಸರ್ಕಾರ ಅಧಿಕಾರದಲ್ಲಿದೆ ಮತ್ತು ಭಾರತದಲ್ಲಿ ಮೇಕ್ ಇನ್ ಇಂಡಿಯ ನೀತಿ ಇದೆ ಅಂತ ಹೇಳಿದಾಗ ನೆರೆದಿದ್ದ ಜನರೆಲ್ಲ ಜೋರಾಗಿ ಚಪ್ಪಾಳೆ ತಟ್ಟುತ್ತಾ ಮೋದಿಯವರಿಗೆ ಜೈಕಾರ ಕೂಗುತ್ತಾರೆ. ಜನ ಮೋದಿ ಮೋದಿ ಅಂತ ಕೂಗುವುದು ನಿಂತ ಮೇಲೆ ಪ್ರಧಾನಿಯವರು ಸಿದ್ದರಾಮಯ್ಯ ಕಡೆ ತಿರುಗಿ ‘ಮುಖ್ಯಮಂತ್ರಿಯವರೇ ಇಂಥದ್ದೆಲ್ಲ ಆಗುತ್ತಿರುತ್ತೆ’ (ಮುಖ್ಯಮಂತ್ರಿ ಜೀ ಐಸೆ ಹೋತೆ ರಹ್ತಾ ಹೈ) ಅನ್ನುತ್ತಾರೆ! ಹೇಗೆ ಪ್ರತಿಕ್ರಿಯಿಸಬೇಕೆಂದು ಗೊತ್ತಾಗದೆ, ಸಿದ್ದರಾಮಯ್ಯ ಮುಗಳ್ನಗುತ್ತಾ ತಲೆ ಕೆರೆದುಕೊಳ್ಳಲಾರಂಭಿಸುತ್ತಾರೆ. ಕರ್ನಾಟಕದಲ್ಲಿ, ಅದೂ ರಾಜ್ಯದ ಮುಖ್ಯಮಂತ್ರಿಯ ಸಮ್ಮುಖದಲ್ಲೇ ಜನ ತನಗೆ ಜೈಕಾರ ಹಾಕಿದ್ದನ್ನು ಪ್ರಧಾನಿ ಮೋದಿ ಸಿದ್ದರಾಮಯ್ಯನವರಿಗೆ ಸೂಚ್ಯವಾಗಿ ಹೇಳಿದರು. ಪ್ರಧಾನಿ ಮಾತಿನ ಮರ್ಮ ಮುಖ್ಯಮಂತ್ರಿಯವರಿಗೆ ಗೊತ್ತಾಗಿರಬೇಕು; ಹಾಗಾಗೇ, ತಲೆ ಕೆರೆದುಕೊಳ್ಳುವ ನೆಪದಲ್ಲಿ ಮುಖ ಮುಚ್ಚಿಕೊಳ್ಳುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ