ಮುಖ್ಯಮಂತ್ರಿ ಸಿದ್ದರಾಮಯ್ಯರ ಹಗುರ ಕಾಮೆಂಟ್ ನಿಂದ ನನ್ನ ಮನೆತನದ ಗೌರವ ಹಾಳಾಗುತ್ತಿದೆ: ನಿರಂಜನ ಹಿರೇಮಠ

|

Updated on: Apr 19, 2024 | 3:01 PM

ತಾನು ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಅಂತ ಅವರಿಗೆ ಗೊತ್ತಿರಲಿ, ಈ ಪ್ರಕರಣವನ್ನು ಇಡೀ ರಾಜ್ಯ ನೋಡುತ್ತಿದೆ, ಅವರು ಹಗುರವಾದ ಹೇಳಿಕೆಗಳನ್ನು ನೀಡಿದರೆ ತನ್ನ ಮನೆತನದ ಗೌರವ ಏನಾಗಬೇಕು? ರಾಜ್ಯದ ಜನ ಅವರ ಮೇಲೆ ಪ್ರೀತಿ ವಿಶ್ವಾಸವಿಟ್ಟು 135 ಸ್ಥಾನಗಳಲ್ಲಿ ಗೆಲ್ಲಿಸಿದ್ದಾರೆ, ಅವರು ತನ್ನ ಕುಟುಂಬ ಅನುಭವಿಸುತ್ತಿರುವ ನೋವನ್ನು ಅರ್ಥಮಾಡಿಕೊಳ್ಳಲಿ ಎಂದು ನಿರಂಜನ ಹೇಳಿದರು.

ಹುಬ್ಬಳ್ಳಿ: ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath) ಕೊಲೆ ವೈಯಕ್ತಿಕ ಕಾರಣಗಳಿಗೆ ಆಗಿದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿರುವುದಕ್ಕೆ ಮೃತಳ ತಂದೆ ನಿರಂಜನ ಹಿರೇಮಠ (Niranjan Hiremath) ತೀವ್ರ ಅಸಮಾಧಾನ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಟಿವಿ9 ಪ್ರತಿನಿಧಿಯೊಂದಿಗೆ ದುಃಖ ಮತ್ತ್ತು ಆಕ್ರೋಶದಲ್ಲಿ ಮಾತಾಡಿರುವ ಅವರು, ಮುಖ್ಯಮಂತ್ರಿಯವರು ಅಷ್ಟು ಹಗುರವಾಗಿ ಹೇಗೆ ಮಾತಾಡುತ್ತಾರೆ? ವೈಯಕ್ತಿಕ ಕಾರಣಗಳಿಗೆ ಕೊಲೆಯಾಗಿದೆ ಅಂದರೆ ಏನರ್ಥ? ತಾನು ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಅಂತ ಅವರಿಗೆ ಗೊತ್ತಿರಲಿ, ಈ ಪ್ರಕರಣವನ್ನು ಇಡೀ ರಾಜ್ಯ ನೋಡುತ್ತಿದೆ, ಅವರು ಹಗುರವಾದ ಹೇಳಿಕೆಗಳನ್ನು ನೀಡಿದರೆ ತನ್ನ ಮನೆತನದ ಗೌರವ ಏನಾಗಬೇಕು? ರಾಜ್ಯದ ಜನ ಅವರ ಮೇಲೆ ಪ್ರೀತಿ ವಿಶ್ವಾಸವಿಟ್ಟು 135 ಸ್ಥಾನಗಳಲ್ಲಿ ಗೆಲ್ಲಿಸಿದ್ದಾರೆ, ಅವರು ತನ್ನ ಕುಟುಂಬ ಅನುಭವಿಸುತ್ತಿರುವ ನೋವನ್ನು ಅರ್ಥಮಾಡಿಕೊಳ್ಳಲಿ ಎಂದು ನಿರಂಜನ ಹೇಳಿದರು.

ಕೊಲೆ ಮಾಡಿದವನನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟು ಸಾಲದು, ಅವನನ್ನು ಎನ್ಕೌಂಟರ್ ಮಾಡಿ ಸಾಯಿಸಬೇಕು, ಈ ಕೃತ್ಯದಲ್ಲಿ ಅವನ ಹೊರತಾಗಿ ಇನ್ನೂ ನಾಲ್ಕು ಜನ ಇದ್ದಾರೆ, ಅವರನ್ನು ಸಹ ಪೊಲೀಸರು ಪತ್ತೆಹಚ್ಚಿ ಬಂಧಿಸಬೇಕು, ಬಹಳ ದಿನಗಳಿಂದ ತನ್ನ ಮಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಷಡ್ಯಂತ್ರ ಜಾರಿಯಲ್ಲಿತ್ತು, ತಮ್ಮ ಮಗಳ ಮೇಲೆ ವಿಶ್ವಾಸವಿತ್ತು ಆದರೆ ಅದು ಕೊಲೆ ಮಾಡುವ ಮಟ್ಟಕ್ಕೆ ಮುಟ್ಟುತ್ತದೆ ಎಂದು ಭಾವಿಸಿರಲಿಲ್ಲ ಎಂದು ನಿರಂಜನ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನೇಹಾ ಹಿರೇಮಠ ಪ್ರಕರಣ: ಅಪರಾಧಿಯನ್ನು ಎನ್ಕೌಂಟರ್ ಮಾಡುವ ಕಾನೂನು ತರುವ ಬಗ್ಗೆ ಸರ್ಕಾರಗಳು ಯೋಚಿಸಬೇಕು: ಸಂತೋಷ್ ಲಾಡ್