ಹುಬ್ಬಳ್ಳಿ ಯುವತಿ ನೇಹಾ ಹಿರೇಮಠ ಪ್ರಕರಣವನ್ನು ನಮ್ಮ ಸರ್ಕಾರ ಸಮರ್ಥವಾಗಿ ನಿಭಾಯಿಸಲಿದೆ: ಡಿಕೆ ಶಿವಕುಮಾರ್

ಹುಬ್ಬಳ್ಳಿ ಯುವತಿ ನೇಹಾ ಹಿರೇಮಠ ಪ್ರಕರಣವನ್ನು ನಮ್ಮ ಸರ್ಕಾರ ಸಮರ್ಥವಾಗಿ ನಿಭಾಯಿಸಲಿದೆ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 19, 2024 | 1:06 PM

ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಇಂಥ ಘಟನೆಗಳು ನಡೆದಿರಲಿಲ್ಲವೇ? ಸರ್ಕಾರ ಯಾವುದೇ ಅಧಿಕಾರದಲ್ಲಿರಲಿ, ಖಾಸಗಿ ವ್ಯವಹಾರಗಳು ನಡೆಯುತ್ತಿರುತ್ತವೆ, ಆದರೆ ತಮ್ಮ ಸರ್ಕಾರ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ಬೆಂಗಳೂರು: ನಿನ್ನೆ ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಆರೋಪಿಯ ವಿರುದ್ಧ ಕಾನೂನು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಿದೆ, ತಮ್ಮ ಸರ್ಕಾರ ಕೃತ್ಯವನ್ನು ಖಂಡಿಸುತ್ತದೆ, ಅಪರಾಧಿಗಳನ್ನು (criminals) ಶಿಕ್ಷಿಸಲು ಸರ್ಕಾರ ಬದ್ಧವಾಗಿದೆ ಮತ್ತು ರಾಜ್ಯದಲ್ಲಿ ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳುವ ಅವಕಾಶವಿಲ್ಲ ಎಂದು ಹೇಳಿದರು. ಇಂಥ ಘಟನೆಗಳು ಪದೇಪದೆ ಜರುಗುತ್ತಿವೆ ಮತ್ತು ಇದು ಹೀಗೆಯೇ ಮುಂದುವರಿದರೆ, ಕರ್ನಾಟಕ ಮತ್ತೊಂದು ಬಿಹಾರ ಅಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿರುವುದನ್ನು ಗಮನಕ್ಕೆ ತಂದಾಗ ಶಿವಕುಮಾರ್, ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಇಂಥ ಘಟನೆಗಳು ನಡೆದಿರಲಿಲ್ಲವೇ? ಸರ್ಕಾರ ಯಾವುದೇ ಅಧಿಕಾರದಲ್ಲಿರಲಿ, ಖಾಸಗಿ ವ್ಯವಹಾರಗಳು ನಡೆಯುತ್ತಿರುತ್ತವೆ, ಆದರೆ ತಮ್ಮ ಸರ್ಕಾರ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಲಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕನ್ನಡʼ ಮಾತನಾಡಿದ್ದಕ್ಕೆ  ಕಾರ್ ಅಡ್ಡ ಹಾಕಿ ನಟಿ ಹರ್ಷಿಕಾಗೆ ಕಿರುಕುಳ; ಪತಿ ಭುವನ್​​ ಮೇಲೆ ಹಲ್ಲೆ