Cheluvarayaswamy in trouble: ಕೆಎಸ್ಆರ್ ಟಿಸಿ ಡ್ರೈವರ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮುಖ್ಯಮಂತ್ರಿಯವರಲ್ಲಿ ಮಾಹಿತಿ ಇಲ್ಲವೇ?

|

Updated on: Jul 06, 2023 | 1:33 PM

ಆತ್ಮಹತ್ಯೆ ಮಾಡಿಕೊಂಡಿರುವ ಜಗದೀಶ ಪತ್ನಿ ಪಂಚಾಯಿತಿ ಸದಸ್ಯೆಯಾಗಿದ್ದಾರೆ ಎಂದು ಹೇಳುವಷ್ಟು ಮಾಹಿತಿ ಮುಖ್ಯಮಂತ್ರಿಯವರಲ್ಲಿದೆ.

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಹನಿಮೂನ್ ಪೀರಿಯಡ್ ಮುಗಿಯುತ್ತಿದ್ದಂತೆಯೇ ಕಂಟಕ ಶುರುವಾಗಿದೆ. ನಾಗಮಂಗಲದ ಕೆಎಸ್ ಆರ್ ಟಿಸಿ ಬಸ್ ಡಿಪೋದಲ್ಲಿ ಡ್ರೈವರ್-ಕಮ್-ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಜಗದೀಶ್ (Jagadish) ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದು ಡೆತ್ ನೋಟ್ ನಲ್ಲಿ ಕೃಷಿ ಸಚಿವ ಎನ್ ಚಲುವರಾಯ ಸ್ವಾಮಿ (N Cheluvarayaswamy) ಹೆಸರು ಉಲ್ಲೇಖಿಸಿದ್ದಾರೆ. ಇಂದು ವಿಧಾನ ಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳು; ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಸಚಿವ ಚಲುವರಾಯ ಸ್ವಾಮಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ಹೇಳಿದಾಗ, ವಿಷಯದ ಸಂಪೂರ್ಣ ಮಾಹಿತಿ ತಮ್ಮಲ್ಲಿಲ್ಲ, ವರದಿ ತರಿಸಿಕೊಂಡು ನೋಡುವುದಾಗಿ ಸಿಎಂ ಹೇಳಿದರು. ಅದಾದ ಬಳಿಕ ಸಿಎಂ ಆಡುವ ಮಾತು ಗೊಂದಲ ಹುಟ್ಟಿಸುತ್ತದೆ. ಆತ್ಮಹತ್ಯೆ ಮಾಡಿಕೊಂಡಿರುವ ಜಗದೀಶ ಪತ್ನಿ ಪಂಚಾಯಿತಿ ಸದಸ್ಯೆಯಾಗಿದ್ದಾರೆ ಎಂದು ಅವರು ಹೇಳುತ್ತಾರೆ. ಅಂದರೆ, ಮುಖ್ಯಮಂತ್ರಿಯವರಿಗೆ ಪ್ರಕರಣದ ಬಗ್ಗೆ ಮಾಹಿತಿ ಇಲ್ಲ ಅಂತೇನೂ ಇಲ್ಲ ಅನ್ನೋದು ಗೊತ್ತಾಗುತ್ತದೆ. ಇದರಲ್ಲಿ ರಾಜಕೀಯದ ಕೋನ ಇರಬಹುದು ಅಂತಲೂ ಸಿದ್ದರಾಮಯ್ಯ ಹೇಳುತ್ತಾರೆ, ಇಲಾಖಾವಾರು ವರ್ಗಾವಣೆ ಸಾಮಾನ್ಯ, ಆದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಯಾಕೆ ನಿರ್ಮಾಣವಾಗಬೇಕು ಅಂತ ಮುಖ್ಯಮಂತ್ರಿ ಕೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on