ರಾಜೀನಾಮೆ ನೀಡುತ್ತೇನೆಂದು ಬಿಅರ್ ಪಾಟೀಲ್ ಎಚ್ಚರಿಸಿರುವ ಪತ್ರ ಸಿಎಂ ಸಿದ್ದರಾಮಯ್ಯಗೆ ಇನ್ನೂ ಸಿಕ್ಕಿಲ್ಲ?

ರಾಜೀನಾಮೆ ನೀಡುತ್ತೇನೆಂದು ಬಿಅರ್ ಪಾಟೀಲ್ ಎಚ್ಚರಿಸಿರುವ ಪತ್ರ ಸಿಎಂ ಸಿದ್ದರಾಮಯ್ಯಗೆ ಇನ್ನೂ ಸಿಕ್ಕಿಲ್ಲ?

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 28, 2023 | 7:44 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಪ್ರಕಾರ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕದ ಒಂದು ಪಟ್ಟಿಯನ್ನು ಹೈಕಮಾಂಡ್ ಗೆ ಕಳಿಸಲಾಗಿದ್ದು ಮೊದಲ ಪ್ರಾಶಸ್ತ್ಯವನ್ನು ಶಾಸಕರಿಗೆ ನೀಡಲಾಗಿದ್ದು ದ್ವಿತೀಯ ಹಾಗೂ ತೃತೀಯ ಪ್ರಾಶಸ್ತ್ಯವನ್ನು ಕಾರ್ಯಕರ್ತರಿಗೆ ನೀಡಲಾಗಿದೆಯಂತೆ ಮತ್ತು ಹೈಕಮಾಂಡ್ ಅನುಮೋದನೆಯ ಬಳಿಕ ನೇಮಕಾತಿಗಳನ್ನು ಮಾಡಲಾಗುವುದಂತೆ.

ಬೆಂಗಳೂರು: ಸಿದ್ದರಾಮಯ್ಯ ಟೀಮಿನ (Team Siddaramaiah) ಮೊದಲ ವಿಕೆಟ್ ಪತನದ ಸಮಯ ಹತ್ತಿರವಾಗಿದೆಯೇ? ಆಳಂದ ಶಾಸಕ ಬಿಆರ್ ಪಾಟೀಲ್ (BR Patil) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಪತ್ರ ನಿಜನಾಗಿದ್ದೇಯಾದರೆ ಈ ಅನುಮಾನ ಮೂಡದಿರದು. ಮಂತ್ರಿಯೊಬ್ಬರು ತನಗೆ ಅವಮಾನಗುವ ರೀತಿಯಲ್ಲಿ ಮಾತಾಡಿದ್ದರಿಂದ ರಾಜೀನಾಮೆ ಸಲ್ಲಿಸುವುದಾಗಿ ಪಾಟೀಲ್ ಪತ್ರ (letter) ಬರೆದಿರುವುದನ್ನು ಇಂದು ನಗರದ ಪಂಚತಾರಾ ಹೋಟೆಲ್ ಬಳಿ ಮುಖ್ಯಮಂತ್ರಿಯವರಿಗೆ ಮಾಧ್ಯಮದವರು ಉಲ್ಲೇಖಿಸಿದಾಗ ತನಗಿನ್ನೂ ಪತ್ರವೇ ಸಿಕ್ಕಿಲ್ಲ ಎಂದು ಹೇಳಿದರು. ಸಿದ್ದರಾಮಯ್ಯ ಹೇಳಿದ್ದು ಪಲಾಯನವಾದದ ಹಾಗೆ ಕಾಣುತ್ತದೆ. ಪಾಟೀಲ್ ಬರೆದ ಪತ್ರ ಮಾಧ್ಯಮದವರಿಗೆ ಗೊತ್ತಾದ ಬಳಿಕವೂ ಅವರಗಿನ್ನೂ ಪತ್ರವೇ ಸಿಕ್ಕಿಲ್ಲ ಅನ್ನೋದನ್ನು ನಂಬೋದು ಸ್ವಲ್ಪ ಕಷ್ಟವೇ. ಅವರ ಪ್ರತಿಕ್ರಿಯೆ ಪಡೆಯಲು ಪತ್ರಕರ್ತರು ಪ್ರಯತ್ನ ಪಟ್ಟಿದ್ದು ನಿಜ, ಆದರೆ ಮುಖ್ಯಮಂತ್ರಿಯವರು ತಮ್ಮ ಮಾತಿಗೆ ಜೋತುಬಿದ್ದರು. ಅವರ ಪತ್ರವಿನ್ನೂ ಸಿಕ್ಕಿಲ್ಲ ಅದು ಸಿಗದೆ ಏನು ತಾನೇ ಹೇಳಲಿ ಅನ್ನುತ್ತಾ ಅವರು ವಿಷಯ ಅಲ್ಲಿಗೆ ನಿಲ್ಲಿಸಿಬಿಟ್ಟರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ