Michael Ajay: ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ

Michael Ajay: ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ

ರಾಜೇಶ್ ದುಗ್ಗುಮನೆ
|

Updated on: Nov 29, 2023 | 9:46 AM

Bigg Boss Kannada: ಬಿಗ್ ಬಾಸ್​ನಲ್ಲಿ ಮೈಕಲ್ ಅಜಯ್ ಅವರು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಈಗ ಕಷ್ಟಪಟ್ಟು ಕನ್ನಡ ಓದಿದ್ದಾರೆ. ಈ ಪ್ರೋಮೋ ಸಖತ್ ವೈರಲ್ ಆಗಿದೆ.

ಮೈಕಲ್ ಅಜಯ್ (Michael Ajay) ಅವರಿಗೆ ಸ್ಪಷ್ಟವಾಗಿ ಕನ್ನಡ ಮಾತನಾಡೋಕೆ ಬರುವುದಿಲ್ಲ. ಆದರೂ ಅವರು ಕನ್ನಡ ಮಾತನಾಡುವುದನ್ನು ಕಲಿಯಲು ಪ್ರಯತ್ನಿಸುತ್ತಿದ್ದಾರೆ. ಕಳೆದ ವಾರ ಅವರಿಗೆ ಕಿಚ್ಚನ ಚಪ್ಪಾಳೆ ಸಿಗಲು ಇದುವೇ ಕಾರಣ. ಈಗ ಮೈಕಲ್​ಗೆ ಕನ್ನಡ ಓದಬೇಕಾದ ಪರಿಸ್ಥಿತಿ ಬಂದೊದಗಿದೆ. ಟಾಸ್ಕ್ ಆಡುವಾಗ ಬಂದ ಲೆಟರ್ ಓದಬೇಕಿತ್ತು. ಅವರು ಕಷ್ಟಪಟ್ಟು ಕನ್ನಡ ಓದಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ಹಂಚಿಕೊಂಡಿದೆ. ತಮ್ಮನ್ನು ತಾವು ಮಣ್ಣಿನ ಮಗ ಎಂದು ಮೈಕಲ್ ಕರೆದುಕೊಂಡಿದ್ದಾರೆ. ಈ ಪ್ರೋಮೋ ಸಖತ್ ವೈರಲ್ ಆಗಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ