ಈಗ ನಡೆಯುತ್ತಿರುವುದು ಲೋಕಸಭಾ ಚುನಾವಣೆ ಅಂತ ಸಿಎಂ ಸಿದ್ದರಾಮಯ್ಯ ಮರೆತಂತಿದೆ: ಸಿಟಿ ರವಿ

|

Updated on: Apr 08, 2024 | 12:49 PM

ಈಗ ಚರ್ಚೆಯಾಗಬೇಕಿರುವುದು ರಾಷ್ಟ್ರಕ್ಕೆ ಯಾರ ನೇತೃತ್ವದ ಅವಶ್ಯಕತೆ ಅನ್ನುವ ವಿಚಾರ, ಯಾವ ಪಕ್ಷ ಕೇಂದ್ರದಲ್ಲಿ ಅಧಿಕಾರ ನಡೆಸಬೇಕು, ಯಾರ ನೇತೃತ್ವ ದೇಶವನ್ನು ಮುನ್ನೆಡಸಲು ಸಮರ್ಥವಾಗಿದೆ, ಯಾವ ಪಕ್ಷದ ನಾಯಕರು ಪ್ರಾಮಾಣಿಕರಾಗಿದ್ದಾರೆ ಮೊದಲಾದ ವಿಷಯಗಳ ಮೇಲೆ ಚರ್ಚೆಯಾಗಬೇಕು ಎಂದು ರವಿ ಹೇಳಿದರು.

ಮೈಸೂರು: ಬಿಜೆಪಿ ಹಿರಿಯ ನಾಯಕ ಸಿಟಿ ರವಿ (CT Ravi) ಮತ್ತು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಅವರು ಇಂದು ನಗರದಲ್ಲಿ ಜಂಟಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದರು. ಏಪ್ರಿಲ್ 14 ರಂದು ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳ ಬಿಜೆಪಿ ಸಮಾವೇಶದಲ್ಲಿ ಮಾತಾಡಲಿದ್ದಾರೆ ಎಂದು ಹೇಳಿದರು. ರಾಜ್ಯದ ಕಾಂಗ್ರೆಸ್ ನಾಯಕರು ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ನಡೆಯುತ್ತಿರುವುದು ಲೋಕಸಭಾ ಚುನಾವಣೆ ಅನ್ನೋದು ಮರೆತಂತಿದೆ. ಈಗ ಚರ್ಚೆಯಾಗಬೇಕಿರುವುದು ರಾಷ್ಟ್ರಕ್ಕೆ ಯಾರ ನೇತೃತ್ವದ ಅವಶ್ಯಕತೆ ಅನ್ನುವ ವಿಚಾರ, ಯಾವ ಪಕ್ಷ ಕೇಂದ್ರದಲ್ಲಿ ಅಧಿಕಾರ ನಡೆಸಬೇಕು, ಯಾರ ನೇತೃತ್ವ ದೇಶವನ್ನು ಮುನ್ನೆಡಸಲು ಸಮರ್ಥವಾಗಿದೆ, ಯಾವ ಪಕ್ಷದ ನಾಯಕರು ಪ್ರಾಮಾಣಿಕರಾಗಿದ್ದಾರೆ ಮೊದಲಾದ ವಿಷಯಗಳ ಮೇಲೆ ಚರ್ಚೆಯಾಗಬೇಕು ಎಂದು ರವಿ ಹೇಳಿದರು. ಆಧಿಕಾರದಲ್ಲಿದ್ದಾಗ ಸರ್ಕಾರ ನಡೆಸಿದ ಹಗರಣಗಳ ಚರ್ಚೆಯೂ ನಡೆಯಬೇಕು ಎಂದು ಮಾಜಿ ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಅಪ್ಪನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಹೀಗೆಯೇ: ಯತೀಂದ್ರ ವಿರುದ್ಧ ಸಿಟಿ ರವಿ ಆಕ್ರೋಶ

Follow us on