ಬೆಂಗಳೂರು ಕಾಲ್ತುಳಿತ ಘಟನೆಗೆ ಜವಾಬ್ದಾರಿಯನ್ನು ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಬೇಕು: ಸಿಟಿ ರವಿ

Updated on: Jun 17, 2025 | 2:29 PM

ಆರ್​ಸಿಬಿ ತಂಡವನ್ನು ಸಿದ್ದರಾಮಯ್ಯ ಯಾಕೆ ಸತ್ಕರಿಸಬೇಕಿತ್ತು? ಅದೇನು ಕರ್ನಾಟಕದ ತಂಡವೇ, ಎಷ್ಟು ಜನ ಕನ್ನಡಿಗ ಆಟಗಾರರು ತಂಡದಲ್ಲಿದ್ದಾರೆ? ಅಷ್ಟಕ್ಕೂ ಮಿಗಿಲಾಗಿ ಇವರು ವಿಧಾನಸೌಧವನ್ನು ಏನಂದುಕೊಂಡಿದ್ದಾರೆ, ಇಲ್ಲಿ ಕಾರ್ಯಕ್ರಮ ಆಯೋಜಿಸುವ ಅವಶ್ಯಕತೆ ಏನಿತ್ತು? ಆಗಿರುವ ಅನಾಹುತಕ್ಕೆ ಜವಾಬ್ದಾರಿಯನ್ನು ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ರವಿ ಹೇಳಿದರು.

ಬೆಂಗಳೂರು, ಜೂನ್ 17: ವಿಧಾನ ಸೌಧದ ಬಳಿ ನಮ್ಮ ವರದಿಗಾರನೊಂದಿಗೆ ಮಾತಾಡಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ಅಹ್ಮದಾಬಾದ್ ನಲ್ಲಿ ನಡೆದ ವಿಮಾನ ದುರಂತ (Ahmedabad Plane Crash) ಮತ್ತು ಬೆಂಗಳೂರಲ್ಲಿ ನಡೆದ ಕಾಲ್ತುಳಿತ ಪ್ರಕರಣಗಳನ್ನು ಸಮೀಕರಿಸಲಾಗಲ್ಲ, ವಿಮಾನ ದುರಂತ ಒಂದು ದುರ್ಘಟನೆ, ಅದನ್ನು ಯಾರೂ ಪ್ರಾಯೋಜಿಸಲ್ಲ, ಎರಡರ ನಡುವೆ ಥಳುಕು ಹಾಕಿ ಸಿಎಂ ಸಿದ್ದರಾಮಯ್ಯ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಬೇಡ, ರಾಜ್ಯದಲ್ಲಿ ನಡೆಯುವ ಅಪಘಾತಗಳಿಗೆ ಸಿದ್ದರಾಮಯ್ಯ ಕಾರಣಾ ಅಂತ ಬಿಜೆಪಿ ಯಾವತ್ತೂ ಹೇಳಿಲ್ಲ ಎಂದು ಹೇಳಿದರು. ಮಹಾರಾಷ್ಟ್ರದ ಪುಣೆಯಲ್ಲಿ ಕುಸಿದ ಸೇತುವೆ 35ವರ್ಷಗಳ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಿರ್ಮಾಣವಾಗಿತ್ತು, ಅದನ್ನು ಕೆದಕಿದರೆ ಕಾಂಗ್ರೆಸ್ ತಲೆಗೆ ಸುತ್ತಿಕೊಳ್ಳುತ್ತದೆ ಎಂದು ರವಿ ಹೇಳಿದರು.

ಇದನ್ನೂ ಓದಿ:  Bengaluru Stampede: ರಾಜ್ಯ ಸರ್ಕಾರದ ಅಮಾನತು ಪ್ರಶ್ನಿಸಿ ಸಿಎಟಿಗೆ ಐಪಿಎಸ್​ ಅಧಿಕಾರಿ ಅರ್ಜಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More