ಗದಗ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಕಾಕತಾಳೀಯಗಳ ಬಗ್ಗೆ ಮಾತಾಡಿದರು!
ಮುಂದುವರಿದು ಮಾತಾಡಿದ ಸಿದ್ದರಾಮಯ್ಯ, ಕೆಹೆಚ್ ಪಾಟೀಲ್ 1973ರಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಆಗಿನ ಮುಖ್ಯಮಂತ್ರಿಗಳಾಗಿದ್ದ ದಿವಂಗತ ದೇವರಾಜ ಅರಸು ಭಾಗವಹಿಸಿದ್ದರು. ಈಗ ಅವರ ಮಗ ಆಯೋಜಿಸಿರುವ ಕಾರ್ಯಕ್ರಮದಲ್ಲಿ ತಾವು ಭಾಗಿಯಾಗಿದ್ದು, ಅರಸು ಮತ್ತು ತಾವು ಮೈಸೂರು ಜಿಲ್ಲೆಯರೆನ್ನುವುದು ಮತ್ತೊಂದು ಕಾಕತಾಳೀಯ ಎಂದರು.
ಬೆಂಗಳೂರು: ಗದಗನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಸುವರ್ಣ ಸಮಾರಂಭದಲ್ಲಿ ಡಿಕೆ ಶಿವಕುಮಾರ್ (DK Shivakumar) 50 ವರ್ಷಗಳ ಹಿಂದಿನ ಇತಿಹಾಸವನ್ನು ಮೆಲುಕು ಹಾಕಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅದಕ್ಕೂ ಒಂದು ದಶಕದಷ್ಟು ಹಿಂದೆ ಹೋಗಿ 1961 ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆದಿತ್ತು ಮತ್ತು ಅದರ ಪ್ರಚಂಡ ಯಶಸ್ಸಿಗೆ ಕಾರಣರಾದವರು ಕೆಹೆಚ್ ಪಾಟೀಲ್ (KH Patil) ಎಂದು ಹೇಳಿದರು. ನಂತರ ಸಿದ್ದರಾಮಯ್ಯ ಕಾಕತಾಳೀಯಗಳ ಬಗ್ಗೆ ಮಾತಾಡಿದರು. 1973 ರಲ್ಲಿ ರಾಜ್ಯಕ್ಕೆ ಕರ್ನಾಟಕ ಅಂತ ನಾಮಕರಣವಾದಾಗ ಕೆಹೆಚ್ ಪಾಟೀಲ್ ಗದಗಿನಲ್ಲಿ ಒಂದು ದೊಡ್ಡ ಕಾರ್ಯಕ್ರಮ ಆಯೋಜಿಸಿದ್ದರು. ಈಗ 50 ವರ್ಷಗಳ ಬಳಿಕ ಅವರ ಮಗ ಹೆಚ್ ಕೆ ಪಾಟೀಲ್ ಗದಗಿನಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ನೇತೃತ್ವ ವಹಿಸಿರುವುದು ಕಾಕತಾಳೀಯವಲ್ಲದೆ ಮತ್ತೇನು ಅಂತ ಸಿದ್ದರಾಮಯ್ಯ ಹೇಳಿದರು. ಮುಂದುವರಿದು ಮಾತಾಡಿದ ಸಿದ್ದರಾಮಯ್ಯ, ಕೆಹೆಚ್ ಪಾಟೀಲ್ 1973ರಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಆಗಿನ ಮುಖ್ಯಮಂತ್ರಿಗಳಾಗಿದ್ದ ದಿವಂಗತ ದೇವರಾಜ ಅರಸು ಭಾಗವಹಿಸಿದ್ದರು. ಈಗ ಅವರ ಮಗ ಆಯೋಜಿಸಿರುವ ಕಾರ್ಯಕ್ರಮದಲ್ಲಿ ತಾವು ಭಾಗಿಯಾಗಿದ್ದು, ಅರಸು ಮತ್ತು ತಾವು ಮೈಸೂರು ಜಿಲ್ಲೆಯರೆನ್ನುವುದು ಮತ್ತೊಂದು ಕಾಕತಾಳೀಯ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ