ಕಾಂಗ್ರೆಸ್ 3 ಹೋಳಾಗಿದೆ; ಸರ್ಕಾರ ಬಿದ್ದೋಗುತ್ತೆ ಎಂದ ನಳಿನ್​ ಕುಮಾರ್​ ಕಟೀಲ್‌

ಕಾಂಗ್ರೆಸ್ 3 ಹೋಳಾಗಿದೆ; ಸರ್ಕಾರ ಬಿದ್ದೋಗುತ್ತೆ ಎಂದ ನಳಿನ್​ ಕುಮಾರ್​ ಕಟೀಲ್‌

ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 03, 2023 | 8:25 PM

ಒಳಜಗಳದಿಂದ ಕಾಂಗ್ರೆಸ್​​ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹುಬ್ಬಳ್ಳಿ(Hubballi)ಯಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್​ ಕುಮಾರ್ ಕಟೀಲ್​(Nalin Kumar Kateel) ಹೇಳಿದ್ದಾರೆ. ಕಾಂಗ್ರೆಸ್​ನಲ್ಲಿ ಈಗ ಮೂರು ಗುಂಪುಗಳಿವೆ. ತಮ್ಮ ಬೀದಿ ಜಗಳ ಮರೆಮಾಚಲು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಹುಬ್ಬಳ್ಳಿ, ನ.03: ಆಂತರಿಕ ಒಳಜಗಳದಿಂದ ಕಾಂಗ್ರೆಸ್​​ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹುಬ್ಬಳ್ಳಿ(Hubballi)ಯಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್​ ಕುಮಾರ್ ಕಟೀಲ್​(Nalin Kumar Kateel) ಹೇಳಿದ್ದಾರೆ. ಕಾಂಗ್ರೆಸ್​ನಲ್ಲಿ ಈಗ ಮೂರು ಗುಂಪುಗಳಿವೆ. ತಮ್ಮ ಬೀದಿ ಜಗಳ ಮರೆಮಾಚಲು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು. ಇನ್ನು ಇದೇ ವೇಳೆ ಸಿದ್ದರಾಮಣ್ಣ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಕಡೆ ವಿದ್ಯುತ್ ಕ್ಷಾಮ ಶುರುವಾಗಿದೆ, ಮತ್ತೊಂದೆಡೆ ನೀರಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷದಿಂದ ಬರ ಅಧ್ಯಯನ ಮಾಡುತ್ತಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ