ಬೆಂಗಳೂರು: ವಿಧಾನ ಸಭೆಯ ಮೇಲ್ಮನೆ ಮತ್ತು ಕೆಳಮನೆಯಲ್ಲಿ ಶುರುವಾಗುವ ಚರ್ಚೆಯನ್ನು ಸದಸ್ಯರು ಒಂದು ಕಡೆಯಿಂದ ಮತ್ತೊಂದು ಕಡೆ ಕೊಂಡೊಯ್ಯುವುದು ಸರ್ವೇಸಾಮಾನ್ಯ. ಇಂದು ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಲು ಎದ್ದ್ದುನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಚರ್ಚೆಯಲ್ಲಿ 13 ಸದಸ್ಯರು ಭಾಗವಹಿಸಿದ್ದರು ಎಂದು ಹೇಳುತ್ತಾ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳನ್ನು (BJP and JDS) ಈಗ ಎರಡು ಪಕ್ಷಗಳಾಗಿ ವಿಂಗಡಣೆ ಮಾಡಲು ಬರೋದಿಲ್ಲ, ಅವೆರಡು ಒಂದಾಗಿ ಬಿಟ್ಟಿವೆ ಎನ್ನುತ್ತ್ತಾರೆ. ಮುಂದುವರಿದು ಮಾತಾಡುವ ಮುಖ್ಯಮಂತ್ರಿ ಚರ್ಚೆಯಲ್ಲಿ ಒಟ್ಟು 13 ಸದಸ್ಯರು ಮಾತಾಡಿದರು- 7 ಬಿಜೆಪಿ, 5 ಕಾಂಗ್ರೆಸ್ ಮತ್ತು ಒಂದು ಜೆಡಿಎಸ್ ಅಂತ ಅವರು ಹೇಳುತ್ತಿದ್ದಾಗ ಜೆಡಿಎಸ್ ಪಕ್ಷದ ಸದಸ್ಯರೊಬ್ಬರು ಬಿಜೆಪಿ ಜೊತೆ ಮೈತ್ರಿಯ ಬಗ್ಗೆ ಏನೋ ಹೇಳುತ್ತಾರೆ, ಅದು ಸರಿಯಾಗಿ ಕೇಳಿಸಲ್ಲ. ಅದಕ್ಕೆ ಸಿದ್ದರಾಮಯ್ಯ, ಕೋಮುವಾದಿ (communal) ಪಕ್ಷದ ಜೊತೆ ಸೇರಿ ನೀವೆಲ್ಲ ಕೋಮುವಾದಿಗಳಾಗಿದ್ದೀರಿ, ನೀವು ಕೋಮುವಾದಿ ಅಲ್ಲ ಅಂತಾದರೆ ಎದ್ದುಬಂದು ನಮ್ಮ ಕಡೆ ಕೂತ್ಕೊಳ್ಳಿ ಅನ್ನುತ್ತಾರೆ.
ಆಗ ಬಿಜೆಪಿಯ ಎನ್ ರವಿಕುಮಾರ್ ನಾವು ರಾಷ್ಟ್ರವಾದಿಗಳು ಅಂದಾಗ ಉರಿದು ಬೀಳುವ ಸಿದ್ದರಾಮಯ್ಯ, ಯಾರೀ ರಾಷ್ಟ್ರವಾದಿ? ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ನವರು ರಾಷ್ಟ್ರವಾದಿಗಳು, ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದ್ದಾಗ ಕೈ ಕಟ್ಟಿ ಕುಳಿತಿದ್ದ ನೀವೆಲ್ಲ ಹೇಗೆ ರಾಷ್ಟ್ರವಾದಿಗಳು ಅಂತ ಕೋಪದಲ್ಲಿ ಹೇಳಿದಾಗ, ಅವರಿಬ್ಬರ ನಡುವೆ ವಾಗ್ವಾದ ಶುರುವಾಗುತ್ತದೆ. ಸಭಾಪತಿ ಬಸವರಾಜ ಹೊರಟ್ಟಿ ಮಧ್ಯಪ್ರವೇಶಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ