Karnataka Budget Session: ರಾಮನಗರ ವಕೀಲರ ಧರಣಿ ಮತ್ತು ಪೊಲೀಸ್ ಇನ್ಸ್​ಪೆಕ್ಟರ್ ಅಮಾನತು-ಸದನಕ್ಕೆ ವಿವರಣೆ ನೀಡಿದ ಜಿ ಪರಮೇಶ್ವರ್

Karnataka Budget Session: ರಾಮನಗರ ವಕೀಲರ ಧರಣಿ ಮತ್ತು ಪೊಲೀಸ್ ಇನ್ಸ್​ಪೆಕ್ಟರ್ ಅಮಾನತು-ಸದನಕ್ಕೆ ವಿವರಣೆ ನೀಡಿದ ಜಿ ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 21, 2024 | 12:08 PM

Karnataka Budget Session:  ತನ್ವೀರ್ ಹುಸ್ಸೇನ್ ರನ್ನು ಸಸ್ಪೆಂಡ್ ಮಾಡಿರುವುದು ತನಿಖೆಗೆ ಸಹಾಯವಾಗಲಿದೆ ಎಂದು ಪರಮೇಶ್ವರ್ ಹೇಳಿದರು. ಹಾಗೆಯೇ ಘಟನೆಗೆ ಕಾರಣವಾದ ವಕೀಲ ಚಾಂದ್ ಪಾಶಾ ಪದೇಪದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಸಾಬೀತಾಗಿರುವುದರಿಂದ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಹೇಳಿದರು.

ಬೆಂಗಳೂರು: ವಿಧಾನಸಭಾ ಬಜೆಟ್ ಅಧಿವೇಶನದ (Karnataka Budget Session) ಇಂದಿನ ಕಾರ್ಯಕಲಾಪ ಆರಂಭವಾದ ಬಳಿಕ ರಾಮನಗರ ವಕೀಲರ ಪ್ರತಿಭಟನೆ ಮತ್ತು ಐಜೂರು ಪೊಲೀಸ್ ಇನ್ಸ್ ಪೆಕ್ಟರ್ ತನ್ವೀರ್ ಹುಸ್ಸೇನ್ (PSI Tanveer Hussain) ವಿರುದ್ಧ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಸದನಕ್ಕೆ ವಿವರಿಸಿದರು. ರಾಮನಗರದ ವಕೀಲರು ಮೂರು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರು ಮತ್ತು ಅವರೆಲ್ಲ ಇಂದು ಬೆಂಗಳೂರಿಗೆ ಬಂದು ಪ್ರತಿಭಟನೆ ಮುಂದುವರಿಸುವ ಉದ್ದೇಶವಿಟ್ಟಿಕೊಂಡಿದ್ದರು. ಅವರ ಮತ್ತು ವಿರೋಧ ಪಕ್ಷದ ನಾಯಕರ ಆಗ್ರಹದಂತೆ ಪೊಲೀಸ್ ಇನ್ಸ್ ಪೆಕ್ಟರ್ ತನ್ವೀರ್ ಹುಸ್ಸೇನ್ ರನ್ನು ಸಸ್ಪೆಂಡ್ ಮಾಡಲಾಗಿದೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಚನ್ನಪಟ್ಟಣದ ಡಿವೈಎಸ್ ಪಿ ತನಿಖೆ ಆರಂಭಿಸಿದ್ದಾರೆ. ತನ್ವೀರ್ ಹುಸ್ಸೇನ್ ರನ್ನು ಸಸ್ಪೆಂಡ್ ಮಾಡಿರುವುದು ತನಿಖೆಗೆ ಸಹಾಯವಾಗಲಿದೆ ಎಂದು ಪರಮೇಶ್ವರ್ ಹೇಳಿದರು. ಹಾಗೆಯೇ ಘಟನೆಗೆ ಕಾರಣವಾದ ವಕೀಲ ಚಾಂದ್ ಪಾಶಾ ಪದೇಪದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಸಾಬೀತಾಗಿರುವುದರಿಂದ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ