ಮಕ್ಕಳ ದಾಹ ನೀರಿಸಲು ಅಜ್ಜಿ ತೋಡಿದ್ದ ಬಾವಿ ಮುಚ್ಚಿದ ಅಧಿಕಾರಿಗಳು, ಶಿರಸಿ ಸಹಾಯಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ
55 ವರ್ಷದ ಗೌರಿ ನಾಯ್ಕ್ ಮೂವತ್ತಕ್ಕೂ ಹೆಚ್ಚು ಮಕ್ಕಳ ದಾಹ ನೀಗಿಸಲು ಕಳೆದ 20 ದಿನದಿಂದ ಶ್ರಮ ವಹಿಸಿ 30 ಅಡಿ ಬಾವಿ ತೋಡಿದ್ರು. ಇನ್ನೂ ಐದಾರು ದಿನ ಕಳೆದ್ರೆ ನೀರು ಬರ್ತಿತ್ತು. ಇದೇ ಕನಸು ಹೊತ್ತು ಮೊನ್ನೆಯೂ ಎಂದಿನಂತೆ ಬಾವಿ ಅಗೆದಿದ್ದ ಗೌರಿನೌಯ್ಕ್ ಮನೆಗೆ ಹೋಗಿದ್ದ ವೇಳೆ ಅಧಿಕಾರಿಗಳು ಬಾವಿ ಮುಚ್ಚಿದ್ದಾರೆ. ಅನುಮತಿ ಪಡೆದಿಲ್ಲ ಎಂದು ಹಲಗೆ ಎಳೆದು ಬೇಲಿ ಹಾಕಿದ್ದಾರೆ.
ಕಾರವಾರ, ಫೆ.21: ಅಂಗನವಾಡಿ ಮಕ್ಕಳ ನೀರಿನ ದಾಹ ನೀಗಿಸಲು ಉತ್ತರ ಕನ್ನಡ ಜಿಲ್ಲೆ ಶಿರಸಿಯ ಗಣೇಶ ನಗರ ನಿವಾಸಿ 55 ವರ್ಷದ ಅಜ್ಜಿ ಗೌರಿನಾಯ್ಕ್ ನಿತ್ಯ ಶ್ರಮವಹಿಸಿ ಕಳೆದ 20 ದಿನದಿಂದ ಬಾವಿ ತೋಡುತ್ತಿದ್ರು. ಇವರ ನಿಸ್ವಾರ್ಥ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿತ್ತು. ಆದ್ರೆ, ಅಜ್ಜಿ ತೋಡಿದ್ದ 30 ಅಡಿ ಆಳದ ಬಾವಿಯನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಹೀಗಾಗಿ ಅಜ್ಜಿ ಗೌರಿ ನಾಯ್ಕ ಕುಟುಂಬದವರು ಹಾಗೂ ಗ್ರಾಮಸ್ಥರು ಶಿರಸಿ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ತನಗೆ ಬಾವಿ ತೋಡಲು ಅವಕಾಶ ನೀಡಿ. ಇಲ್ಲವಾದ್ರೆ ಬಾವಿಯಲ್ಲಿ ಕುಳಿತು ಉಪವಾಸ ಸತ್ಯಾಗ್ರಹ ಮಾಡುವೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾನು ಜೀವ ಬಿಟ್ಟೆನೂ ಆದ್ರೆ ಬಾವಿ ತೆಗೆಯುವುದನ್ನ ನಿಲ್ಲಿಸುವುದಿಲ್ಲ ಎಂದು ಆಧುನಿಕ ಭಗೀರಥಿ, 55 ವರ್ಷದ ಗೌರಿನಾಯ್ಕ್ ಅವರು ಕಳೆದ 20 ದಿನದಿಂದ ಬಾಗಿ ತೋಡುತ್ತಿದ್ದರು. ಅಂಗನವಾಡಿ ಕೇಂದ್ರದ ಮಕ್ಕಳಿಗೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಬಾವಿ ತೋಡುತ್ತಿದ್ರು. ಕಳೆದ 20 ದಿನದಿಂದ ಒಂದಲ್ಲ ಎರಡಲ್ಲ ಬರೋಬ್ಬರಿ 30 ಅಡಿ ಬಾವಿ ತೋಡಿದ್ರು. ಗೌರಿನಾಯ್ಕ್ ಅವರ ಕಾರ್ಯಕ್ಕೆ ರಾಜ್ಯಾದ್ಯಂತ ಶ್ಲಾಘನೆ ವ್ಯಕ್ತವಾಗಿತ್ತು. ಇನ್ನೂ ನಾಲ್ಕೈದು ದಿನ ಕಳೆದ್ರೆ ನೀರು ಬರ್ತಿತ್ತು. ಆದ್ರೆ, ಅಜ್ಜಿಯ ಕನಸು, ಮಕ್ಕಳ ದಾಹಕ್ಕೆ ಅಧಿಕಾರಿಗಳು ತಣ್ಣೀರೆರೆಚಿದ್ದಾರೆ. ಅಜ್ಜಿ ತೋಡಿದ್ದ ಬಾವಿಯನ್ನ ಹಲಗೆಯಿಂದ ಬಾವಿ ಮುಚ್ಚಿಹಾಕಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ