ಜೀವ ಬಿಟ್ಟೆನೂ, ಆದ್ರೆ ಬಾವಿ ತೆಗೆಯುವುದನ್ನ ನಿಲ್ಲಿಸುವುದಿಲ್ಲ ಎಂದ ಶಿರಸಿಯ ಗೌರಿ ನಾಯ್ಕ್​

ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆಯ ಶಿರಸಿಯ ಗಣೇಶ ನಗರದ ಅಂಗನವಾಡಿ ಆವರಣದಲ್ಲಿ 55 ವರ್ಷದ ಗೌರಿ ನಾಯ್ಕ್​ ಅವರು ಬಾವಿ ತೋಡುತ್ತಿದ್ದು, ಇದೀಗ ಅಧಿಕಾರಿಗಳು ಬಾವಿ ಮೇಲೆ ಮರದ ಹಲಗೆಗಳನ್ನು ಅಡ್ಡ ಹಾಕಿದ್ದಾರೆ. ಇದರಿಂದ ಗೌರಿ ನಾಯ್ಕ್​ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೀವ ಬಿಟ್ಟೆನೂ, ಆದ್ರೆ ಬಾವಿ ತೆಗೆಯುವುದನ್ನ ನಿಲ್ಲಿಸುವುದಿಲ್ಲ ಎಂದ ಶಿರಸಿಯ ಗೌರಿ ನಾಯ್ಕ್​
ಗೌರಿ ನಾಯ್ಕ್​
Follow us
| Updated By: ರಮೇಶ್ ಬಿ. ಜವಳಗೇರಾ

Updated on: Feb 20, 2024 | 6:16 PM

ಉತ್ತರ ಕನ್ನಡ (ಫೆಬ್ರವರಿ.20): ಅಂಗನವಾಡಿ ಮಕ್ಕಳಿಗೆ ಕುಡಿಯಲು ನೀರಿಗಾಗಿ ಉತ್ತರ ಕನ್ನಡ (Uttara Kannada)ಜಿಲ್ಲೆಯ ಜಿಲ್ಲೆಯ ಶಿರಸಿಯ ಗಣೇಶ್‌ನಗರದಲ್ಲಿ ಗೌರಿ ನಾಯ್ಕ್ (gauri naik)ಎನ್ನುವರು ಜನವರಿ 30ರಿಂದ ಬಾವಿ ತೋಡುತ್ತಿರುವುದನ್ನು ನಿಲ್ಲಿಸುವಂತೆ ಅಧಿಕಾರಿಗಳು ಸಚಿವ ಮಂಕಾಳು ವೈದ್ಯ ಮನವಿ ಮಾಡಿದ್ದಾರೆ. ಆದರೂ ಬಿಡದ ಗೌರಿ ನಾಯ್ಕ್ , ನಾನು ಜೀವ ಬಿಟ್ಟೆನೂ. ಆದ್ರೆ ಬಾವಿ ತೆಗೆಯುವುದನ್ನ ನಿಲ್ಲಿಸುವುದಿಲ್ಲ ಎಂದು ತಮ್ಮ ಕೆಲಸ ಮುಂದುವರಿಸಿದ್ದಾರೆ. ಇನ್ನು ನಿನ್ನೆ(ಫೆ.19) ಅಧಿಕಾರಿಗಳು ಬಂದು ಬಾವಿ ಮೇಲೆ ಮರದ ಹಲಗೆ ಅಡ್ಡ ಇಟ್ಟಿದ್ದು, ಇದಕ್ಕೆ ಗೌರಿ ನಾಯ್ಕ್​ ಆಕ್ರೋಶಗೊಂಡಿದ್ದಾರೆ. ಅಲ್ಲದೇ ನಾನು ಜೀವ ಬಿಟ್ಟೆನೂ, ಆದ್ರೆ ಬಾವಿ ತೆಗೆಯುವುದನ್ನ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಧಿಕಾರಿಗಳು ಹಗಲೆ ಇಟ್ಟು ಹೋಗಿರುವ ಬಗ್ಗೆ ಇಂದು(ಫೆ.20) ಮಾಧ್ಯಮಗಳ ಜೊತೆ ಮಾತನಾಡಿದ ಗೌರಿ ನಾಯ್ಕ್, ಕಳೆದ 20 ದಿನಗಳಿಂದ 30 ಅಡಿ ಬಾವಿ ತೆಗೆದಿದ್ದೇನೆ. ನಿನ್ನೆ(ಫೆ.19) ಸಾಯಂಕಾಲ 6 ಗಂಟೆ ವರೆಗೂ ಬಾವಿ ತೆಗೆದಿದ್ದೇನೆ. ನಿನ್ನೆ ನಾನು ಮನೆಗೆ ಹೋದ ಬಳಿಕ ಅಧಿಕಾರಿಗಳು ಬಂದು ಹಲಗೆಯಿಂದ ಬಾವಿ ಮುಚ್ಚಿದ್ದಾರೆ. ಇನ್ನೂ ನಾಲ್ಕೈದು ದಿನಗಳಲ್ಲಿ ನೀರು ಬರುತಿತ್ತು. ನಾನು ಸಮಾಜಕ್ಕೆ ನನ್ನಿಂದ ಸೇವೆ ಸಿಗಲಿ ಎಂಬ ಉದ್ದೆಶಕ್ಕೆ ಮಾಡುತ್ತಿದ್ದೇನೆ. ನಾನು ಯಾರಿಂದಲೂ ಹಣ ಕೇಳಿಲ್ಲ, ಸನ್ಮಾನ ಕೇಳಿಲ್ಲ. ನನ್ನ ಆತ್ಮ ತೃಪ್ತಿಗಾಗಿ ಮನೆಯಲ್ಲಿ‌ ಮಕ್ಕಳ ಕಡೆಯಿಂದ ಬೈಸ್ಕೊಂಡು ಬಾವಿ ತೆಗೆಯುತ್ತಿದ್ದೇನೆ. ನಾನು ಜೀವ ಬಿಟ್ಟೆನೂ, ಆದ್ರೆ ಬಾವಿ ತೆಗೆಯುವುದನ್ನ ನಿಲ್ಲಿಸುವುದಿಲ್ಲ ಎಂದು ತಮ್ಮ ನಿರ್ಧಾರ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಬಾವಿ ತೋಡಲು ಗೌರಿ ನಾಯ್ಕ್​ಗೆ ಅಡ್ಡಿ: ಸ್ಪಷ್ಟನೆ ನೀಡಿದ ಉತ್ತರ ಕನ್ನಡ ಸಿಇಒ

ನೀವು ಪ್ರಚಾರಕ್ಕಾಗಿ ಇದನ್ನು ಮಾಡುತ್ತಿದ್ದಿರಿ. ಬಾವಿ ತೆಗೆಯುದನ್ನ ಇಲ್ಲಿಗೆ ನಿಲ್ಲಿಸಿ. ನಾವು ನಮ್ಮ ಇಲಾಖೆಯಿಂದ ಬಾವಿ ತೆಗೆದು ನೀರು ಕೊಡುತ್ತೆವೆ ಎಂದು ಅಧಿಕಾರಿ ಒಬ್ಬರು ನಂಗೆ ಕರೆ ಮಾಡಿ ಹೇಳಿದ್ರು. ನಾನು ಇವರಿಂದ ಏನು ಕೇಳುತ್ತಿದ್ದೆನೆ. ನಿಸ್ವಾರ್ಥ ಸೇವೆಗೂ ನನಗೆ ಅವಕಾಶ ಕೊಡುತ್ತಿಲ್ಲ ಯಾಕೆ? ಎಂದು ಪ್ರಶ್ನಿಸಿದ ಗೌರಿ ನಾಯ್ಕ್​, ನಾನು ಯಾವುದೇ ಕಾರಣಕ್ಕೂ ನನ್ನ ಶ್ರಮ ವ್ಯರ್ಥ ಆಗಲು ಬಿಡುವುದಿಲ್ಲ. ನನ್ನ ಕೆಲಸಕ್ಕೆ ಬೇಂಕತಲೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಅಧಿಕಾರಿಗಳ ನಡೆಗೆ ಅಸಮಾಧಾನ ಹೊರಹಾಕಿದರು.

ಸಚಿವ ಮಂಕಾಳು ವೈದ್ಯ ಬಂದು ನಂಗೆ ಶಾಲು ಹಾರ ಹಾಕಿದ್ರು. ಇದೆಲ್ಲ ನಂಗೆ ಬೇಡ ಬಾವಿ ತೆಗೆಯಲು ಬಿಡಿ ಅಂತಾ ಹೇಳಿದೆ. ಅಜ್ಜಿ ನಿಮಗೆ ಕಷ್ಟ ಆಗುತ್ತೆ ಬೇಡ ಇಲ್ಲಿಗೆ ನಿಲ್ಲಿಸಿ ಅಂದ್ರು. ನನಗೆ ಯಾವುದೇ ಕಷ್ಟ ಆಗುವುದಿಲ್ಲ, ಅವಕಾಶ ಕೊಡಿ. ನೀರು ಬಂದ ಬಳಿಕ ನಿಮಗೆ ಬಾವಿ ಕೊಡುತ್ತೇನೆ. ನೀವು ಎನ್ ಮಾಡುವುದು ಇದೇ ಅದನ್ನ ಮಾಡಿಕೊಳ್ಳಿ. ಆದ್ರೆ ನೀರು ಬರುವವರೆಗೂ ನಂಗೆ ಬಿಟ್ಟ ಬಿಡಿ ಎಂದು ಹೇಳಿದ್ದೆ. ಆದ್ರೆ ನಿನ್ನೆ ಒಮ್ಮಿಂದ ಒಮ್ಮೆಲೆ ಬಂದು ಅಧಿಕಾರಿಗಳು ಹಲಗೆಯಿಂದ ಮುಚ್ಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ