Karnataka Budget Session: ಪರಿಷತ್​ನಲ್ಲಿ ಉತ್ತರಿಸುವಾಗ ಅಡ್ಡಿಮಾಡಿದ ಜೆಡಿಎಸ್ ಸದಸ್ಯರ ಮೇಲೆ ರೇಗಿದ ಸಿದ್ದರಾಮಯ್ಯ

|

Updated on: Feb 15, 2024 | 1:07 PM

Karnataka Budget Session: ವಿಧಾನಮಂಡಲದಲ ಬಜೆಟ್ ಅಧಿವೇಶನದ ನಾಲ್ಕನೇ ದಿನವಾಗಿರುವ ಇವತ್ತು ವಿಧಾನ ಪರಿಷತ್ ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತಿದ್ದ ಸಿದ್ದರಾಮಯ್ಯ ಒಂದು ಹಂತದಲ್ಲಿ ಜೆಡಿಎಸ್ ಪಕ್ಷದ ಸದಸ್ಯರ ವಿರುದ್ಧ ತಾಳ್ಮೆ ಕಳೆದುಕೊಂಡರು. ಬೇರೆಯರು ಕೇಳಿರುವ ಪ್ರಶ್ನೆಗೆ ಉತ್ತರಿಸುತ್ತಿದ್ದೇನೆ, ನನ್ನ ಉತ್ತರವಿನ್ನೂ ಮುಗಿದಿಲ್ಲ, ಅಗಲೇ ನೀವು ಬೆರಳೆತ್ತಿದರೆ ಹೇಗೆ ಅಂತ ಸಿಡುಕುತ್ತಾರೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸದನದಲ್ಲಿ ಮಾತಾಡುತ್ತಿರಲಿ ಅಥವಾ ಸದನದ ಹೊರಗೆ, ಅವರ ಮಾತಿನ ವರಸೆ ಮಾತ್ರ ಬದಲಾಗಲ್ಲ. ವಿಧಾನಮಂಡಲದಲ ಬಜೆಟ್ ಅಧಿವೇಶನದ ನಾಲ್ಕನೇ ದಿನವಾಗಿರುವ ಇವತ್ತು ವಿಧಾನ ಪರಿಷತ್ ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತಿದ್ದ ಸಿದ್ದರಾಮಯ್ಯ ಒಂದು ಹಂತದಲ್ಲಿ ಜೆಡಿಎಸ್ ಪಕ್ಷದ ಸದಸ್ಯರ (JDS MLCs) ವಿರುದ್ಧ ತಾಳ್ಮೆ ಕಳೆದುಕೊಂಡರು. ಅಸಲಿಗೆ ಅವರು ಕೇಂದ್ರದಿಂದ ಬಿಡುಗಡೆಯಾಗಬೇಕಿರುವ ಅನುದಾನಗಳ ಬಗ್ಗೆ ಮಾತಾಡುತ್ತಾ, ಭದ್ರಾ ಮೇಲ್ದಂಡೆ ಯೋಜೆನೆಗೆ (Upper Bhadra Project) ರಾಷ್ಟ್ರೀಯ ಯೋಜನೆ ಸ್ಥಾನಮಾನ ನೀಡಿದರೂ ಯೋಜನೆಗಾಗಿ 2023-24 ಸಾಲಿನ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 5,300 ಕೋಟಿ ರೂ.ಗಳನ್ನು ಘೋಷಿಸಿದರೂ ಇದುವರೆಗೆ ಒಂದು ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ.

ಹಾಗೆಯೇ, ಬರ ಪರಿಹಾರಕ್ಕಾಗಿ ಕರ್ನಾಟಕ ಸರ್ಕಾರ ಕೇಳಿರುವ 11,495 ಕೋಟಿ ರೂ. ಕೇಂದ್ರದಿಂದ ಬಿಡುಗಡೆಯಾಗಿಲ್ಲ ಅಂತ ಹೇಳುತ್ತಿದ್ದಾಗ, ಜೆಡಿಎಸ್ ಪಕ್ಷದ ಟಿಎ ಸರವಣ ಮತ್ತು ಬೇರೆ ಕೆಲ ಸದಸ್ಯರು ಪ್ರಶ್ನೆ ಕೇಳಲು ಕೈಯೆತ್ತುತ್ತಾರೆ. ಆಗಲೇ ಸಿಟ್ಟಿಗೇಳುವ ಸಿದ್ದರಾಮಯ್ಯ, ಬೇರೆಯರು ಕೇಳಿರುವ ಪ್ರಶ್ನೆಗೆ ಉತ್ತರಿಸುತ್ತಿದ್ದೇನೆ, ನನ್ನ ಉತ್ತರವಿನ್ನೂ ಮುಗಿದಿಲ್ಲ, ಅಗಲೇ ನೀವು ಬೆರಳೆತ್ತಿದರೆ ಹೇಗೆ ಅಂತ ಸಿಡುಕುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ