ಟಿಕೆಟ್ ಸಿಗಲಾರದೆಂಬ ಅತಂಕದಲ್ಲಿರುವ ಸಂಸದ ಪ್ರತಾಪ್ ಸಿಂಹರನ್ನು ಲೇವಡಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ!

ಅರುಣ್​ ಕುಮಾರ್​ ಬೆಳ್ಳಿ

Updated on: Mar 12, 2024 | 6:25 PM

ತನಗೆ ಪುನಃ ಟಿಕೆಟ್ ಸಿಕ್ಕರೆ ರಾಜ್ಯದ ಮುಖ್ಯಮಂತ್ರಿಯವರ ಕುರ್ಚಿ ಅಲ್ಲಾಡತೊಡಗುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದ್ದನ್ನು ಸಿದ್ದರಾಮಯ್ಯನವರಿಗೆ ಹೇಳಿದಾಗ, ಲೇವಡಿ ಮಾಡುವ ಸ್ವರದಲ್ಲಿ ಓ ಅಂದ ಅವರು, ಪ್ರತಾಪ್ ಸಿಂಹ ಎರಡು ಸಲ ಸಂಸದರಾಗಿದ್ದರಲ್ಲ? ಯಾಕೆ ತನ್ನ ಕುರ್ಚಿ ಅಲ್ಲಾಡಲಿಲ್ಲ ಎಂದು ಕೇಳಿದರು

ಚಾಮರಾಜನಗರ: ನಗರದಲ್ಲಿಂದು ಆಯೋಜಿಸಲಾಗಿದ್ದ ಆರ್ ಧ್ರುವನಾರಾಯಣ (R Dhruvanarayana) ಮೊದಲ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ, ಸಂಸದ ಪ್ರತಾಪ್ ಸಿಂಹರನ್ನು (Pratap Simha) ಲೇವಡಿ ಮಾಡಿದರು. ತನಗೆ ಪುನಃ ಟಿಕೆಟ್ ಸಿಕ್ಕರೆ ರಾಜ್ಯದ ಮುಖ್ಯಮಂತ್ರಿಯವರ ಕುರ್ಚಿ ಅಲ್ಲಾಡತೊಡಗುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದ್ದನ್ನು ಸಿದ್ದರಾಮಯ್ಯನವರಿಗೆ ಹೇಳಿದಾಗ, ಲೇವಡಿ ಮಾಡುವ ಸ್ವರದಲ್ಲಿ ಓ ಅಂದ ಅವರು, ಪ್ರತಾಪ್ ಸಿಂಹ ಎರಡು ಸಲ ಸಂಸದರಾಗಿದ್ದರಲ್ಲ? ಯಾಕೆ ತನ್ನ ಕುರ್ಚಿ ಅಲ್ಲಾಡಲಿಲ್ಲ ಎಂದು ಕೇಳಿದರು. ಮುಂದುವರಿದು ಮಾತಾಡಿದ ಸಿದ್ದರಾಮಯ್ಯ, ಅಸಲು ವಿಷಯವೇನೆಂದರೆ, ಬಿಜೆಪಿಯಿಂದ ಯಾರು ಸ್ಪರ್ಧಿಸಲಿದ್ದಾರೆ, ಅಭ್ಯರ್ಥಿ ಯಾರು ಅನ್ನೋದು ತಮಗೆ ಸಂಬಂಧವಿಲ್ಲದ ವಿಚಾರ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕೆನ್ನುವುದಷ್ಟೇ ತಮ್ಮ ಗುರಿ, ಬಡವರ ಮತ್ತು ಜನಪರ ಕಾರ್ಯಕ್ರಮಗಳನ್ನು ಜನತೆಗೆ ನೀಡಿದ್ದೇವೆ, ಅವುಗಳ ಆಧಾರದ ಮೇಲೆ ಮತಯಾಚಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು, ಅದೇ ಪಕ್ಷದ ಸಂಕಲ್ಪವಾಗಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೈಸೂರು: ಟಿಕೆಟ್ ಕೈತಪ್ಪುವ ವದಂತಿ ಬೆನ್ನಲ್ಲೇ ಪ್ರತಾಪ್ ಸಿಂಹ ಅಚ್ಚರಿಯ ಹೇಳಿಕೆ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.