Loading video

ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮವನ್ನು ಸಿಎಂ ವಿನಾಕಾರಣ ಪ್ರತಿಷ್ಠೆಯ ವಿಷಯವಾಗಿಸಿದ್ದಾರೆ: ಪ್ರತಾಪ್ ಸಿಂಹ

Updated on: Jul 17, 2025 | 12:13 PM

ಸಿದ್ದರಾಮಯ್ಯನವರು ಶಿಷ್ಟಾಚಾರದ ಬಗ್ಗೆ ಮಾತಾಡೋದು ಹಾಸ್ಯಾಸ್ಪದ ಅನಿಸುತ್ತದೆ, ಅವರು ಮೊದಲ ಅವಧಿಗೆ ಸಿಎಂ ಆಗಿದ್ದಾಗ ಮೈಸೂರು ವರ್ತಲ ರಸ್ತೆಯ ಉದ್ಘಾಟನಾ ಕಾರ್ಯಕ್ರಮವನ್ನು ಸಂಸತ್ತಿನ ಅಧಿವೇಶನ ನಡೆಯುತ್ತಿದ್ದಾಗ ಏರ್ಪಡಿಸಿದ್ದರು, ನಾನು ತಕರಾರು ಎತ್ತಿದ್ದಾಗ ಸಂಸದ ಶ್ರೀನಿವಾಸ ಪ್ರಸಾದ್ ಸುಮ್ಮನಿರುವಂತೆ ಹೇಳಿದ್ದರು, ಆಗ ಸಿದ್ದರಾಮಯ್ಯನವರಿಗೆ ಶಿಷ್ಟಾಚಾರದ ನೆನಪಾಗಿರಲಿಲ್ಲವೇ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.

ಮೈಸೂರು, ಜುಲೈ 17: ಮುಖ್ಯಮಂತ್ರಿ ಸಿದ್ದರಾಯ್ಯ (CM Siddaramaiah) ಮೈಸೂರಿಗೆ ಬರಬೇಕಾದರೆ ಹೆಲಿಕಾಪ್ಟರ್​​ನಲ್ಲಿ ಬರುತ್ತಾರೆ, ಇಲ್ಲಿಂದ ಕೆಅರ್ ಪೇಟೆ ಮತ್ತು ಹೆಚ್​ಡಿ ಕೋಟೆಗೆ ಹೋಗಬೇಕಾದರೂ ಚಾಪರ್​ನಲ್ಲೇ ಹೋಗುತ್ತಾರೆ, ಅಂಥವರು ಮೊನ್ನೆ ಸಿಗಂದೂರು ಚೌಡೇಶ್ವರಿ ಸೇತುವೆ ಉದ್ಧಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೆಲಿಕಾಪ್ಟರ್ ನಲ್ಲಿ ಇಂಡಿಗೆ ಹೋಗಬಹುದಿತ್ತು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು. ಶಿವಮೊಗ್ಗ ಸಂಸದ ರಾಘವೇಂದ್ರ ಸಿಎಂ ಮನೆಗೆ ಹೋಗಿ ಆಮಂತ್ರಣ ನೀಡಿದ್ದಾರೆ, ಕೇಂದ್ರ ಸರ್ಕಾರದಿಂದಲೂ ಪತ್ರ ಬಂದಿದೆ, ಆ ಭಾಗದ ಜನ ತಮ್ಮ ದಶಕಗಳ ಕನಸು ಈಡೇರಿದ ಸಂಭ್ರಮ ಆಚರಿಸುವುದನ್ನು ಕಂಡು ಖುಷಿ ಪಡುವ ಬದಲು ಸಿದ್ದರಾಮಯ್ಯ ತಮಗೆ ಆಹ್ವಾನವಿರಲಿಲ್ಲ, ಕಾರ್ಯಕ್ರಮ ಮುಂದೂಡಿ ಅಂತ ಪ್ರಧಾನಿ ಮೋದಿ ಮತ್ತು ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ, ವಿನಾಕಾರಣ ಇದನ್ನೊಂದು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿದ್ದಾರೆ ಎಂದು ಪ್ರತಾಪ್ ಹೇಳಿದರು.

ಇದನ್ನೂ ಓದಿ:     ಸಿಗಂದೂರು ಸೇತುವೆ ಉದ್ಘಾಟನೆ; ನಿತಿನ್ ಗಡ್ಕರಿ ವಿರುದ್ಧ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ