ಚಿತ್ರದುರ್ಗ ಕಾಂಗ್ರೆಸ್ ಸಮಾವೇಶದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ತಿಗೊಳಿಸುವ ಶಪಥ ಮಾಡಿದ ಸಿದ್ದರಾಮಯ್ಯ

|

Updated on: Apr 04, 2024 | 6:48 PM

ಯೋಜನೆಯ ಬಗ್ಗೆ ವಿವರವಾಗಿ ಮಾತಾಡಿದ ಅವರು ಅದು ಒಮ್ಮೆ ಪೂರ್ಣಗೊಂಡರೆ 5.5 ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಕರ್ಯ ಲಭ್ಯವಾಗಲಿದೆ, ಮತ್ತು ಯೋಜನೆಯ ಒಟ್ಟು ವೆಚ್ಚ ₹21,000 ಕೋಟಿ ಅಂತ ಅಂದಾಜಿಸಲಾಗಿದ್ದು ಇದುವರೆಗೆ ₹ 9,000 ಕೋಟಿ ಖರ್ಚು ಮಾಡಲಾಗಿದೆ, ಮುಂಬರುವ ವರ್ಷಗಳಲ್ಲಿ ಉಳಿದ ₹13,000 ಕೋಟಿ ಹಣ ಬಿಡುಗಡೆ ಮಾಡಿ ಭದ್ರಾ ಮೇಲ್ದಂಡೆ ಯೋಜೆನೆಯನ್ನು ಕಂಪ್ಲೀಟ್ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಚಿತ್ರದುರ್ಗ: ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ (Congress Convention) ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah), ಭದ್ರಾ ಮೇಲ್ದಂಡೆ ಯೋಜನೆಯನ್ನು (Upper Bhadra Project) ಫೂರ್ಣಗೊಳಿಸಲು ತಮ್ಮ ಸರಕಾರ ಬದ್ಧವಾಗಿದೆ ಮತ್ತು ಸರ್ಕಾರದ ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸುವುದು ಶತಸಿದ್ಧ ಎಂದು ಹೇಳಿದರು. ಕೇಂದ್ರ ಸರ್ಕಾರದಿಂದ ಅನುದಾನ ನಿರೀಕ್ಷಿಸಲಾಗಿತ್ತು, ಅದರೆ ಅದು ಬಿಡುಗಡೆಯಾಗದ ಕಾರಣ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ತಾವು ಭದ್ರಾ ಮೇಲ್ದಂಡೆ ಯೋಜನೆಗೆ ₹1,500 ಕೋಟಿ ತೆಗೆದಿರಿಸಿರುವುದಾಗಿ ಸಿದ್ದಾರಾಮಯ್ಯ ಹೇಳಿದರು. ಯೋಜನೆಯ ಬಗ್ಗೆ ವಿವರವಾಗಿ ಮಾತಾಡಿದ ಅವರು ಅದು ಒಮ್ಮೆ ಪೂರ್ಣಗೊಂಡರೆ 5.5 ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಕರ್ಯ ಲಭ್ಯವಾಗಲಿದೆ, ಮತ್ತು ಯೋಜನೆಯ ಒಟ್ಟು ವೆಚ್ಚ ₹21,000 ಕೋಟಿ ಅಂತ ಅಂದಾಜಿಸಲಾಗಿದ್ದು ಇದುವರೆಗೆ ₹ 9,000 ಕೋಟಿ ಖರ್ಚು ಮಾಡಲಾಗಿದೆ, ಮುಂಬರುವ ವರ್ಷಗಳಲ್ಲಿ ಉಳಿದ ₹13,000 ಕೋಟಿ ಹಣ ಬಿಡುಗಡೆ ಮಾಡಿ ಭದ್ರಾ ಮೇಲ್ದಂಡೆ ಯೋಜೆನೆಯನ್ನು ಕಂಪ್ಲೀಟ್ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸ್ವಕ್ಷೇತ್ರ ಮೈಸೂರಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು!

Follow us on