ಡಿ ಸುಧಾಕರ್ ವಿರುದ್ಧ ಎಫ್ ಐಆರ್ ದಾಖಲಾಗಿದ್ದರೂ ಸಿಎಂ ಸಿದ್ದರಾಮಯ್ಯ ತಮ್ಮ ಸಚಿವನನ್ನು ಇನ್ನೂ ಕರೆಸಿ ಮಾತಾಡಿಲ್ಲ!
ನಂತರ ಸಿದ್ದಾರಾಮಯ್ಯ, ಸುಧಾಕರ್ ಮಿನಿಸ್ಟ್ರಾಗಿದ್ದರೂ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ಹೇಳುತ್ತಾರೆ. ಸಚಿವನ ವಿರುದ್ಧ ಪ್ರಕರಣ ದಾಖಲಾಗಿರುವುದೇ ಒಂದು ದೊಡ್ಡ ಸಾಧನೆ ಅನ್ನುವಂತಿತ್ತು ಅವರ ಮಾತಿನ ವರಸೆ. ಸುಧಾಕರ್ ರನ್ನು ಕರೆಸಿ ಮಾತಾಡುತ್ತೇನೆ ಎಂದು ಹೇಳುತ್ತಾ ಸಿದ್ದರಾಮಯ್ಯ ಅಲ್ಲಿಂದ ಹೊರಡುತ್ತಾರೆ.
ಬೆಂಗಳೂರು: ಯೋಜನೆ & ಸಾಂಖ್ಯಿಕ ಇಲಾಖೆ ಸಚಿವ ಡಿ ಸುಧಾಕರ್ (D Sudhakar) ವಿರುದ್ಧ ಜಾತಿ ನಿಂದನೆ ಮತ್ತು ಭೂ ಕಬಳಿಕೆ ಕೇಸ್ ದಾಖಲಾಗಿರೋದು ನಿಸ್ಸಂದೇಹವಾಗಿ ಸಿದ್ದರಾಮಯ್ಯ ಸರ್ಕಾರವನ್ನು (Siddaramaiah Government) ಇಕ್ಕಟ್ಟಿಗೆ ಸಿಲುಕಿಸಿದೆ. ಇಂದು ನಗರದಲ್ಲಿ ಸುದ್ದಿಗಾರರು ಸಿದ್ದರಾಮಯ್ಯರನ್ನು ಸುತ್ತುವರಿದು ಸುಧಾಕರ್ ಬಗ್ಗೆ ಕೇಳಿದಾಗ ಸಿದ್ದರಾಮಯ್ಯ ಉತ್ತರಿಸಲು ತಡವರಿಸಿದರು. ಅವರ ವಿರುದ್ಧ ಜಾತಿ ನಿಂದನೆ ಮತ್ತು ಭೂಕಬಳಿಕೆ ಕೇಸ್ ದಾಖಲಾಗಿದೆ ಸರ್ ಅಂತ ಪತ್ರಕರ್ತರು ಹೇಳಿದಾಗ ಮುಖ್ಯಮಂತ್ರಿ ಜಾತಿ ನಿಂದನೆ ಕೇಸ್ (atrocity case) ದಾಖಲಾಗಿದೆಯಾ ಅಂತ ಕೇಳಿ, ಪತ್ರಿಕೆಯ ವರದಿಯೊಂದರ ಮುಖಾಂತರ ವಿಷಯ ತಿಳಿದುಕೊಂಡಿರುವುದಾಗಿ ಹೇಳುತ್ತಾರೆ. ನಂತರ ಸಿದ್ದಾರಾಮಯ್ಯ, ಸುಧಾಕರ್ ಮಿನಿಸ್ಟ್ರಾಗಿದ್ದರೂ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ಹೇಳುತ್ತಾರೆ. ಸಚಿವನ ವಿರುದ್ಧ ಪ್ರಕರಣ ದಾಖಲಾಗಿರುವುದೇ ಒಂದು ದೊಡ್ಡ ಸಾಧನೆ ಅನ್ನುವಂತಿದೆ ಅವರ ಮಾತಿನ ವರಸೆ. ಸುಧಾಕರ್ ರನ್ನು ಕರೆಸಿ ಮಾತಾಡುತ್ತೇನೆ ಎಂದು ಹೇಳುತ್ತಾ ಮುಖ್ಯಮಂತ್ರಿ ಹೊರಡುತ್ತಿರುವಾಗ, ಇನ್ನೂ ಮಾತಾಡಿಲ್ವಾ ಸರ್ ಅಂತ ಸುದ್ದಿಗಾರರು ಕೇಳುತ್ತಾರೆ. ಕರೆಸಿ ಮಾತಾಡುತ್ತೇನೆ ಅಂತ ಜೋರಾಗಿ ಹೇಳುತ್ತಾ ಅಲ್ಲಿಂದ ಹೊರಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ