Bengaluru: ಪೌರಕಾರ್ಮಿಕರ ಹಟಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿನಿಂದ ಮೇಲೆದ್ದು ಮನವಿ ಪತ್ರ ಸ್ವೀಕರಿಸಿದರು!
ಆದರೆ ಕಾರ್ಮಿಕರು ನಿಮ್ಮ ಪಾದಕ್ಕೆ ಅಡ್ಡಬೀಳ್ತೀವಿ ದಯವಿಟ್ಟು ಬನ್ನಿ ಅಂತ ಗೋಗರೆಯತ್ತಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸಿಡುಕುವುದು ಹೊಸತೇನಲ್ಲ, ಅವಸರದಲ್ಲಿದ್ದಾಗ ಅವರನ್ನು ಜನ ಅಥವಾ ಮಧ್ಯಮದವರು ತಡೆದರೆ ಸಿಡುಕುವುದು ನಿಶ್ಚಿತ. ಇವತ್ತು ಆಗಿದ್ದು ಅದೇ. ಕಾರಿನಲ್ಲಿ ಹೊರಟಿದ್ದ ಮುಖ್ಯಮಂತ್ರಿಯನ್ನು ಮನವಿಯೊಂದನ್ನು ಸಲ್ಲಿಸಲು ಬಂದ ಬಿಬಿಎಂಪಿಯ ಪೌರ ಕಾರ್ಮಿಕರು (pourakarmikas) ಅವರ ಅಧಿಕೃತ ನಿವಾಸದ ಬಳಿಗೆ ಆಗಮಿಸಿದ್ದರು. ದಯವಿಟ್ಟು ಕಾರಿನಿಂದ ಇಳಿದು ನಮ್ಮ ಮನವಿ ಸ್ವೀಕರಿಸಿ ಅಂತ ಕಾರ್ಮಿಕರ ಪೈಕಿ ಕೆಲವರು ಕಾರಿನ ಬಳಿ ಬಂದು ಅವಲತ್ತುಕೊಳ್ಳುತ್ತಾರೆ. ಅದರೆ ಗಡಿಬಿಡಿಯಲ್ಲಿದ್ದ ಸಿದ್ದರಾಮಯ್ಯ ಕೋಪದಿಂದ ಮೀಟಿಂಗ್ ಗೆ (meeting) ಲೇಟ್ ಆಗ್ತಿದೆ ಅಂತ ಹೇಳಿ ಕಾರು ಚಾಲಕನಿಗೆ ಹೊರಡುವಂತೆ ಹೇಳುತ್ತಾರೆ. ಆದರೆ ಕಾರ್ಮಿಕರು ನಿಮ್ಮ ಪಾದಕ್ಕೆ ಅಡ್ಡಬೀಳ್ತೀವಿ ದಯವಿಟ್ಟು ಬನ್ನಿ ಅಂತ ಗೋಗರೆಯತ್ತಾರೆ. ಅವರ ಹಟಕ್ಕೆ ಮಣಿಯುವ ಸಿದ್ದರಾಮಯ್ಯ ಕಾರಿನ ಫುಟ್ ಬೋರ್ಡ್ ಮೇಲೆ ನಿಂತುಕೊಂಡು ಕಾರ್ಮಿಕರತ್ತ ಕಕೈ ಬೀಸಿ ಮನವಿ ಪತ್ರ ಸ್ವೀಕರಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ