ಚಂದ್ರಪ್ರಭ ಬಿಗ್ ಬಾಸ್​​ನಿಂದ ಹೊರಬಂದಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಕಾಕ್ರೋಚ್ ಸುಧಿ

Edited By:

Updated on: Nov 17, 2025 | 4:34 PM

ಚಂದ್ರಪ್ರಭ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನಿಂದ ತಾವಾಗಿಯೇ ಹೊರಗೆ ಬರಬೇಕು ಎಂದು ನಿರ್ಧರಿಸಿದ್ದರು. ಆ ರೀತಿ ತೀರ್ಮಾನಕ್ಕೆ ಕಾರಣ ಏನು ಎಂದು ಅವರು ಬಹಿರಂಗಪಡಿಸಲಿಲ್ಲ. ಚಂದ್ರಪ್ರಭ ಕುರಿತ ಪ್ರಶ್ನೆಗೆ ಈಗ ಕಾಕ್ರೋಚ್ ಸುಧಿ ಅವರು ಉತ್ತರ ನೀಡಿದ್ದಾರೆ.

ಹಾಸ್ಯ ಕಲಾವಿದ ಚಂದ್ರಪ್ರಭ (Chandraprabha) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಿಂದ ಎಲಿಮಿನೇಟ್ ಆದರು. ತಾವಾಗಿಯೇ ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕು ಎಂದು ಅವರು ನಿರ್ಧರಿಸಿದರು. ಆ ರೀತಿ ತೀರ್ಮಾನ ತೆಗೆದುಕೊಳ್ಳಲು ಕಾರಣ ಏನು ಎಂದು ಅವರು ಬಹಿರಂಗಪಡಿಸಲಿಲ್ಲ. ಮನೆಯಿಂದ ಹೊರಡುವುದಕ್ಕೂ ಮುನ್ನ ಹಲವರು ಪ್ರಶ್ನಿಸಿದರೂ ಕೂಡ ಅವರು ಅದಕ್ಕೆ ಉತ್ತರ ನೀಡಲಿಲ್ಲ. ಈಗ ಕಾಕ್ರೋಚ್ ಸುಧಿ (Cockroach Sudhi) ಅವರು ಬಿಗ್ ಬಾಸ್​ ಆಟದಿಂದ ಔಟ್ ಆಗಿದ್ದಾರೆ. ಹೊರಬಂದು ಟಿವಿ9 ಜೊತೆ ಮಾತನಾಡಿದ ಅವರು ಚಂದ್ರಪ್ರಭ ಕುರಿತ ಪ್ರಶ್ನೆಗೂ ಉತ್ತರ ನೀಡಿದ್ದಾರೆ. ‘ಚಂದ್ರಪ್ರಭ ಅವರಿಗೆ ಸೊಂಟು ನೋವು ತುಂಬಾ ಕಾಡುತ್ತಿತ್ತು. ಬಹಳ ಒದ್ದಾಡುತ್ತಿದ್ದರು. ನನಗೆ ಗೊತ್ತಿದ್ದಂತೆ ಅದೇ ಕಾರಣಕ್ಕೆ ಅವರು ಹೊರಬಂದರು. ಈಗ ಅವರಿಗೆ ನಾನು ಫೋನ್ ಮಾಡಿ ಕೇಳಬೇಕು. ಬಿಗ್ ಬಾಸ್ ಮನೆಯಲ್ಲಿ ಅವರು ಹೊರಟಾಗ ಕೇವಲ 5 ನಿಮಿಷ ಅವಕಾಶ ಇತ್ತು. ಆಗ ಅವರು ಏನೂ ಹೇಳಲಿಲ್ಲ’ ಎಂದು ಕಾಕ್ರೋಚ್ ಸುಧಿ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.