Video: ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಉತ್ತರಾಖಂಡದ ನೈನಿತಾಲ್ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಟ್ಯಾಕ್ಸಿ ಚಾಲಕನೊಬ್ಬ ನಿಲ್ಲಿಸಿದ್ದ ಕಾರಿನೊಳಗೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ವಾಹನದೊಳಗೆ ಬೆಚ್ಚಗಿರಲು ಆ ವ್ಯಕ್ತಿ ಸಣ್ಣ ಬೆಂಕಿ ಹಾಗೂ ಹೊಗೆ ಬರುವ ಸಾಧನವನ್ನು ಕಾರಿನೊಳಗೆ ಇಟ್ಟು ಮಲಗಿದ್ದರು. ವಿಷಕಾರಿ ಅನಿಲವನ್ನು ಉಸಿರಾಡಿ ಅವರು ಪ್ರಾಣ ಕಳೆದುಕೊಂಡಿದ್ದಾರೆ.
ನೈನಿತಾಲ್, ಡಿಸೆಂಬರ್ 30: ಉತ್ತರಾಖಂಡದ ನೈನಿತಾಲ್ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಟ್ಯಾಕ್ಸಿ ಚಾಲಕನೊಬ್ಬ ನಿಲ್ಲಿಸಿದ್ದ ಕಾರಿನೊಳಗೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ವಾಹನದೊಳಗೆ ಬೆಚ್ಚಗಿರಲು ಆ ವ್ಯಕ್ತಿ ಸಣ್ಣ ಬೆಂಕಿ ಹಾಗೂ ಹೊಗೆ ಬರುವ ಸಾಧನವನ್ನು ಕಾರಿನೊಳಗೆ ಇಟ್ಟು ಮಲಗಿದ್ದರು. ವಿಷಕಾರಿ ಅನಿಲವನ್ನು ಉಸಿರಾಡಿ ಅವರು ಪ್ರಾಣ ಕಳೆದುಕೊಂಡಿದ್ದಾರೆ.
ಕಾರಿನೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಟ್ಯಾಕ್ಸಿ ಚಾಲಕ ಪತ್ತೆಯಾಗಿದ್ದಾರೆ. ಕಾರ್ಬನ್ ಮಾನಾಕ್ಸೈಡ್ ಹೊಗೆಯಿಂದ ಉಂಟಾಗುವ ಮಾರಕ ಅಪಾಯದ ಅರಿವಿಲ್ಲದೆ ಚಾಲಕ ಮುಚ್ಚಿದ ಕಾರಿನೊಳಗೆ ಬ್ರೇಜಿಯರ್ ಉರಿಸಿದ್ದರು ಎನ್ನಲಾಗಿದೆ. ಮೃತರನ್ನು ಉತ್ತರ ಪ್ರದೇಶದ ಟ್ಯಾಕ್ಸಿ ಚಾಲಕ ಮತ್ತು ಮಥುರಾ ಜಿಲ್ಲೆಯ ಸಿರೋಹಾ ಯಮುನಾಪರ್ ನಿವಾಸಿ ಮನೀಶ್ ಗಂಧರ್ ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

