ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಚಳ್ಳಕೆರೆ ಗೇಟ್ ಬಳಿ ಗೂಡಂಗಡಿಗಳು ನೆಲಸಮ
ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ಜೆಸಿಬಿ ಗರ್ಜನೆ ಮೊಳಗಿದೆ. ಅಕ್ರಮವಾಗಿ ಇಡಲಾಗಿದ್ದ ಗೂಡಂಗಡಿಗಳನ್ನು ನಗರಸಭೆ ಆಯುಕ್ತೆ ಲಕ್ಷ್ಮೀ ನೇತೃತ್ವದಲ್ಲಿ ತೆರವು ಮಾಡಲಾಗಿದೆ. ಜೆಸಿಬಿ ಬಳಸಿ ಅಂಗಡಿಗಳನ್ನು ತೆರವು ಮಾಡಲಾಗಿದ್ದು, ವ್ಯಾಪಾರಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಆದರೆ, ಕೋರ್ಟ್ ಆದೇಶ ಪಾಲಿಸುತ್ತಿದ್ದೇವಷ್ಟೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚಿತ್ರದುರ್ಗ, ಡಿಸೆಂಬರ್ 30: ಬೆಂಗಳೂರಿನಲ್ಲಿ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ ತೆರವು ವಿಚಾರ ದೇಶದಾದ್ಯಂತ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ, ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ಅಕ್ರಮವಾಗಿ ಇಡಲಾಗಿದ್ದ ಗೂಡಂಗಡಿಗಳ ತೆರವು ಮಾಡಲಾಗಿದೆ. ನಗರಸಭೆ ಆಯುಕ್ತೆ ಲಕ್ಷ್ಮೀ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ಜೆಸಿಬಿ ಬಳಸಿ ಹಣ್ಣು, ತರಕಾರಿ, ಟೀಸ್ಟಾಲ್, ಗುಜರಿ ಅಂಗಡಿಗಳ ತೆರವು ಮಾಡಲಾಗಿದೆ. ನಗರಸಭೆ ಅಧಿಕಾರಿಗಳ ವಿರುದ್ಧ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಕೋರ್ಟ್ ಆದೇಶದಂತೆ ನಾವು ಗೂಡಂಗಡಿ ತೆರವು ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
