ಬೆಂಗಳೂರಿನ ಡಬಲ್ ಡೆಕ್ಕರ್ ಮೇಲ್ಸೇತುವೆ ಮೇಲೆ ಆಯುಕ್ತ ಬಿ ದಯಾನಂದ್​ ಬುಲೆಟ್​ ರೈಡ್​​

|

Updated on: Jul 22, 2024 | 10:37 AM

ದಕ್ಷಿಣ ಭಾರತದ ಡಬಲ್ ಡೆಕ್ಕರ್ (ರೋಡ್-ಕಮ್-ರೈಲು) ಮೇಲ್ಸೇತುವೆ ಲೋಕಾರ್ಪಣೆಗೊಂಡಿದೆ. ಈ ಡಬಲ್ ಡೆಕ್ಕರ್ ಫ್ಲೈಓವರ್​​ನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್​​ವರೆಗೆ ರಾಯಲ್ ಎನ್ ಫೀಲ್ಡ್​​ ಬೈಕ್ ಚಲಾಯಿಸಿದರು ಬೈಕ್ ಚಲಾಯಿಸಿದರು.

ದಕ್ಷಿಣ ಭಾರತದ ಡಬಲ್ ಡೆಕ್ಕರ್ (ರೋಡ್-ಕಮ್-ರೈಲು) ಮೇಲ್ಸೇತುವೆ ಲೋಕಾರ್ಪಣೆಗೊಂಡಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಳೆದವಾರ ಬೆಂಗಳೂರಿನ (Bengaluru) ರಾಗಿಗುಡ್ಡ ಮೆಟ್ರೋ ಸ್ಟೇಷನ್ ಬಳಿ ಡಬಲ್ ಡೆಕ್ಕರ್ ಫ್ಲೈಓವರ್​​ನಲ್ಲಿ (Double Decker Flyover) ಕಾರು ಡ್ರೈವ್​ ಮಾಡಿಕೊಂಡು ಹೋಗುವ ಮೂಲಕ ಸಂಚಾರಕ್ಕೆ ಚಾಲನೆ ನೀಡಿದ್ದರು. ಈ ಡಬಲ್ ಡೆಕ್ಕರ್ ಫ್ಲೈಓವರ್​​ನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ (B. Dayananda) ಅವರು ಬೈಕ್ ಚಲಾಯಿಸಿದರು. ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್​​ವರೆಗೆ ರಾಯಲ್ ಎನ್ ಫೀಲ್ಡ್​​ ಬೈಕ್ ಚಲಾಯಿಸಿದರು. ಬೈಕ್​ ಚಾಲನೆಯ ಅನುಭವವನ್ನು ಸಾಮಾಜಿಕ ಮಾಧ್ಯಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದು, “ಅತ್ಯಂತ ಸುಗಮ ಮತ್ತು ಸುಲಲಿತ ಪ್ರಯಾಣ” ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿರುವ ದಕ್ಷಿಣ ಭಾರತದ ಫಸ್ಟ್ ಡಬಲ್ ಡೆಕ್ಕರ್ ಫ್ಲೈಓವರ್ ಲೋಕಾರ್ಪಣೆ, ಇದರ ವಿಶೇಷತೆಗಳೇನು?

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 22, 2024 10:28 AM