ಸಹೋದರರ ನಡುವೆ ರಾತ್ರಿ ಜಗಳ ಬೆಳಗ್ಗೆ ಒಬ್ಬ ಸಹೋದರನ ಟೊಮೆಟೋ ತೋಟ ಸರ್ವನಾಶ!

ಸಹೋದರರ ನಡುವೆ ರಾತ್ರಿ ಜಗಳ ಬೆಳಗ್ಗೆ ಒಬ್ಬ ಸಹೋದರನ ಟೊಮೆಟೋ ತೋಟ ಸರ್ವನಾಶ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 29, 2022 | 3:13 PM

ತನಗೆ ನ್ಯಾಯ ಕೊಡಿಸಬೇಕೆಂದು ಶಿವಣ್ಣ ಸಂಬಂಧ ಪಟ್ಟ ಅಧಿಕಾರಿಗಳಿಗೆ ಅಳುತ್ತಾ ಮನವಿ ಮಾಡಿಕೊಳ್ಳುತ್ತಿದ್ದಾರೆ. ಕಳೆದ ರಾತ್ರಿ ಶಿವಣ್ಣ ಮತ್ತು ಅವರ ಸಹೋದರಾಗಿರುವ ಸಿದ್ದಣ್ಣ ಮತ್ತು ಮಹೇಶ್ ನಡುವೆ ತಗಾದೆ ನಡೆದಿತ್ತಂತೆ.

ತುಮಕೂರು: ನಿನ್ನೆ ಹಾವೇರಿ ಜಿಲೆಯ ಹಾನಗಲ್ ತಾಲ್ಲೂಕಿನ ಗ್ರಾಮವೊಂದರಲ್ಲಿ ಅಡಿವೆಪ್ಪ ಆಲದಕಟ್ಟಿ ಎನ್ನುವ ರೈತರ ಜಮೀನಲ್ಲಿ ದುಷ್ಕರ್ಮಿಗಳು ಅಡಿಕೆಮರಗಳನ್ನು ಕತ್ತರಿಸಿ ಹಾಕಿದ್ದ ವಿಡಿಯೋ ನಿಮಗೆ ತೋರಿಸಿದ್ದೆವು. ಇಂದು ನಾವು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನಲ್ಲಿರುವ ಕೊಟ್ಟ ಗ್ರಾಮದಲ್ಲಿ (Kotta village) ಶಿವಣ್ಣ ಹೆಸರಿನ ರೈತರ ಟೊಮೆಟೊ ತೋಟವನ್ನು ತೋರಿಸುತ್ತಿದ್ದೇವೆ. ಕಿಡಿಗೇಡಿಗಳು ರಾತ್ರೋರಾತ್ರಿ ಶಿವಣ್ಣನವರ (Shivanna) ತೋಟದಿಂದ 5,000 ಕ್ಕಿಂತ ಹೆಚ್ಚು ಟೊಮೆಟೊ ಗಿಡಗಳನ್ನು (tomato plants) ಕಿತ್ತು ಹಾಕಿದ್ದಾರೆ. ತನಗೆ ನ್ಯಾಯ ಕೊಡಿಸಬೇಕೆಂದು ಶಿವಣ್ಣ ಸಂಬಂಧ ಪಟ್ಟ ಅಧಿಕಾರಿಗಳಿಗೆ ಅಳುತ್ತಾ ಮನವಿ ಮಾಡಿಕೊಳ್ಳುತ್ತಿದ್ದಾರೆ. ಕಳೆದ ರಾತ್ರಿ ಶಿವಣ್ಣ ಮತ್ತು ಅವರ ಸಹೋದರಾಗಿರುವ ಸಿದ್ದಣ್ಣ ಮತ್ತು ಮಹೇಶ್ ನಡುವೆ ತಗಾದೆ ನಡೆದಿತ್ತಂತೆ.