Karnataka Budget Session; ಕಾಂಗ್ರೆಸ್ ಸರ್ಕಾರಕ್ಕೆ ಸಮಾನತೆ ಹೇಳಲಷ್ಟೇ ಬೇಕು, ಕಾರ್ಯರೂಪದಲ್ಲಿ ತರಲಲ್ಲ: ಧೀರಜ್ ಮುನಿರಾಜ್
ಧೀರಜ್ ಮುನಿರಾಜ್ ಮಾತಿನಿಂದ ಕೆರಳುವ ಹಿರಿಯ ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ, ನೀನು ಮೊದಲ ಬರಿಗೆ ಶಾಸಕನಾಗಿ ಅಯ್ಕೆಯಾಗಿ ಅಸೆಂಬ್ಲಿಗೆ ಬಂದಿದ್ದೀಯ, ಇದು ಮೊದಲಿನಿಂದ ನಡೆದುಕೊಂಡಿರುವ ಪ್ರಕ್ರಿಯೆ, ಅಡಳಿತ ಪಕ್ಷದ ಶಾಸಕರಿಗೆ ಹೆಚ್ಚಿನ ಅನುದಾನ ಸಿಗೋದು ಹೊಸತೇನಲ್ಲ, ಮುಂಬರುವ ದಿನಗಳಲ್ಲಿ ನಿನಗೆ ಎಲ್ಲವೂ ಗೊತ್ತಾಗುತ್ತದೆ ಎಂದು ಹೇಳುತ್ತಾರೆ.
ಬೆಳಗಾವಿ, 19 ಮಾರ್ಚ್: ಸಿದ್ದರಾಮಯ್ಯ ಸರ್ಕಾರ ಬಜೆಟ್ ಮಂಡನೆಯಲ್ಲಿ ಡಾ ಬಿಅರ್ ಅಂಬೇಡ್ಕರ್, ಬುದ್ಧ, ಬಸವಣ್ಣನವರ ಹೆಸರುಗಳನ್ನು ಯಥೇಚ್ಛವಾಗಿ ಬಳಸುತ್ತದೆಯೇ ಹೊರತು ಆ ಮಹಾನುಭಾವರು ಸಾರಿದ ಸಮಾನತೆಯನ್ನು ಕಾರ್ಯರೂಪದಲ್ಲಿ ಪ್ರದರ್ಶಿಶಿಸುವುದಿಲ್ಲ ಎಂದು ದೊಡ್ಡಬಳ್ಳಾಪುರ ಬಿಜೆಪಿ ಶಾಸಕ ಧೀರಜ್ ಮುನಿರಾಜ್ ಹೇಳಿದರು. ಗ್ರಾಮೀಣಾಭಿವೃದ್ಧಿ ಯೋಜನೆಗ ಅಡಿ ಪ್ರತಿ ಕಾಂಗ್ರೆಸ್ ಶಾಸಕನಿಗೆ ₹ 25 ಕೋಟಿ ಅನುದಾನ ಸಿಗುತ್ತದೆ, ಈ ಬಾರಿಯೇನೂ ಬೇರೆ ಶಾಸಕರಿಗೆ ಹತ್ತು ಕೋಟಿ ರೂ ಸಿಗುತ್ತಿದೆ, ಅದರೆ ಎಲ್ಲಿದೆ ಸಮಾನತೆ ಅಂತ ಅವರು ಪ್ರಶ್ನಿಸುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Budget Session: ಯಾದಗಿರಿ ಜಿಲ್ಲೆ ಸಮಸ್ಯೆಗಳನ್ನು ಮಾರ್ಮಿಕವಾಗಿ ಸರ್ಕಾರದ ಗಮನಕ್ಕೆ ತಂದ ಶಾಸಕ ಶರಣಗೌಡ ಕಂದ್ಕೂರ್